ಆಹಾರಲೈಫ್ ಸ್ಟೈಲ್
ಆಲು ಸ್ಟಫ್ಟ್

ಬೇಕಾಗುವ ಪದಾರ್ಥಗಳು
ಆಲೂಗಡ್ಡೆ – 4 ರಿಂದ 5
ಬೆಣ್ಣೆ- 5 ಚಮಚ
ಕೊತ್ತಂಬರಿ ಸೊಪ್ಪು – ಸ್ಪಲ್ಪ
ಹಾಲು- 5 ಚಮಚ
ಈರುಳ್ಳಿ- 2
ಉಪ್ಪು- ರುಚಿಗೆ ತಕ್ಕಷ್ಟು
ಕಾಳು ಮೆಣಸಿನ ಪುಡಿ- ಅರ್ಧ ಟೀ ಚಮಚ
ಮಾಡುವ ವಿಧಾನ: ಮೊದಲಿಗೆ ಆಲುಗೆಡ್ಡೆಯನ್ನ ಬೇಯಿಸಿಕೊಳ್ಳಿ. ತಣ್ಣಗಾದ ಬಳಿಕ ಆಲುಗೆಡ್ಡೆಯ ಮಧ್ಯಭಾಗವನ್ನ ತೆಗೆದು ಹೊರಗಿನ ಭಾಗವನ್ನ ರೌಂಡ್ ಶೇಪ್ ನಲ್ಲಿ ಉಳಿಸಿಕೊಳ್ಳಿ. ಬಳಿಕ ತೆಗೆದಿಟ್ಟುಕೊಂಡಿರುವ ಆಲುಗೆಡ್ಡೆಗೆ ಹಾಲು, ಬೆಣ್ಣೆ, ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ರೌಂಡ್ ಶೇಪ್ ನಲ್ಲಿರುವ ಆಲುಗೆಡ್ಡೆಯ ಮಧ್ಯ ಭಾಗಕ್ಕೆ ಮಿಕ್ಸ್ ಮಾಡಿಕೊಂಡಿರುವ ಮಿಶ್ರಣವನ್ನ ಹಾಕಿ ಓವನ್ ನಲ್ಲಿಟ್ಟು ಬೇಯಿಸಿಕೊಳ್ಳಿ. ಈಗ ರುಚಿಕರವಾದ ಆಲು ಸ್ಟಫ್ಟ್ ಸವಿಯಲು ಸಿದ್ದ.




