
ಕೋವಿಡ್ ಕಾರಣದಿಂದ ಕೊಂಚ ಮಟ್ಟಿಗೆ ಚೇತರಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಮತ್ತೆ ಹೊಡೆತ ಬಿದ್ದಿದೆ. ವೀಕೆಂಡ್ ಕರ್ಫ್ಯೂ ಹಾಗೂ ಚಿತ್ರಮಂದಿರಗಳಲ್ಲಿ ಶೇ 50 ಆಸನ ವ್ಯವಸ್ಥೆ ನಿಯಮ ಇರೋದ್ರಿಂದ ಹೊಸ ಸಿನಿಮಾಗಳು ತೆರೆಗೆ ಬರೋಕೆ ಹಿಂದೇಟು ಹಾಕುತ್ತಿದೆ. ಈಗಾಗಲೇ ಕೆಲವೊಂದು ಸಿನಿಮಾಗಳು ರಿಲೀಸ್ ದಿನಾಂಕವನ್ನ ಮುಂದೂಡಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಜಿಎಫ್ 2 ಸಿನಿಮಾದ ಬಿಡುಗಡೆಯ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದಾರೆ.
ಕೆಜಿಎಫ್ 2 ಸಿನಿಮಾ ಕಳೆದ ಜುಲೈ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ ಎಂಟು ತಿಂಗಳುಗಳ ಕಾಲ ಸಿನಿಮಾದ ಬಿಡುಗಡೆಯನ್ನ ಮುಂದೂಡಲಾಗಿದೆ. ಶೀಘ್ರವೇ ಮೂರನೆ ಅಲೆ ಕಡಿಮೆ ಆಗಲಿದೆ. ನಾವು ಈ ರೀತಿಯ ಪರಿಸ್ಥಿತಿ ಬರುತ್ತದೆ ಎಂದು ಮೊದಲೆ ನಿರೀಕ್ಷಿಸಿದ್ದೆವು. ಹೀಗಾಗಿ ಸೇಫ್ ರಿಲೀಸ್ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಯಶ್ ಹೇಳಿದ್ದಾರೆ.
ಇತ್ತೀಚೆಗೆ ಯಶ್ ಬರ್ತಡೇ ಪ್ರಯುಕ್ತ ಕೆಜಿಎಫ್ 2 ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಪೋಸ್ಟರ್ನಲ್ಲಿ ರಿಲೀಸ್ ದಿನಾಂಕ ಏಪ್ರಿಲ್ 14 ಎಂದು ಬರೆಯಲಾಗಿತ್ತು. ಹೀಗಾಗಿ ಚಿತ್ರತಂಡ ಮೊದಲೆ ಹೇಳಿದಂತೆ ಏಪ್ರಿಲ್ 14ರಂದು ಸಿನಿಮಾ ಬಿಡುಗಡೆ ಮಾಡೋದಾಗಿ ಸ್ಪಷ್ಟನೆ ನೀಡಿದೆ.



