Breaking NewsLatestಸಂಗೀತ/ನೃತ್ಯಸಿನಿಮಾ

Lata Mangeshkar: ಖ್ಯಾತ ಗಾಯಕಿ ಲತಾ ಮಂಗೇಶ್ಕರ್​​ಗೆ ಕೊರೊನಾ ಪಾಸಿಟಿವ್​​​ : ಐಸಿಯುನಲ್ಲಿ ಚಿಕಿತ್ಸೆ

ಮುಂಬಯಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್​​ ಅವರಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದ ನೈಟಿಂಗೇಲ್ ಎಂದೇ ಕರೆಯಲ್ಪಡುವ 92 ವರ್ಷದ ಲತಾ ಮಂಗೇಶ್ಕರ್ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾ ಪಾಸಿಟಿವ್ ಜೊತೆಗೆ ಲತಾ ಮಂಗೇಶ್ಕರ್ ಅವರು ಇತರ ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. ಜೊತೆಗೆ ವಯಸ್ಸಿನ ಕಾರಣದಿಂದ ವೈದ್ಯರು ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿರೋದಾಗಿ ಮೂಲಗಳು ತಿಳಿಸಿವೆ.

2019ರ ನವೆಂಬರ್ ತಿಂಗಳಲ್ಲಿ ಉಸಿರಾಟದ ತೊಂದರೆಯಿಂದ ಲತಾ ಮಂಗೇಶ್ಕರ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button