Breaking NewsLatestಜಿಲ್ಲಾ ಸುದ್ದಿತುಮಕೂರುರಾಜಕೀಯರಾಜ್ಯಸುದ್ದಿ
ಮಾಧುಸ್ವಾಮಿ ಮಾರ್ಗದರ್ಶನದಲ್ಲಿ ಮುನ್ನಡೆಯುವೆ: ಆರಗ ಜ್ಞಾನೇಂದ್ರ

ತುಮಕೂರು: ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ನನ್ನ ಆತ್ಮೀಯ ಸ್ನೇಹಿತರು. ಅವರ ಮಾರ್ಗದರ್ಶನ ಪಡೆದು ಮುನ್ನಡೆಯುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಜಿಲ್ಲಾ ಕೇಂದ್ರ ತುಮಕೂರು ನಗರದಲ್ಲಿ, 73ನೇ ಗಣರಜ್ಯೋತ್ಸವದಂದು, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧೂಸ್ವಾಮಿ ಹಾಗೂ ಆರ್. ಅಶೋಕ್ ಅವರಿಗೆ, ಮುಖ್ಯಮಂತ್ರಿ ಗಳು ಇನ್ನೂ ಹೆಚ್ಚಿನ ಜವಾಬ್ದಾರಿ ನಿರ್ವಹಣೆ ನೀಡುವ ಆಲೋಚನೆ ಇರಬಹುದು ಎಂದರು.
ಬಿಜೆಪಿ ಬಿಟ್ಟು ಕೆಲ ಶಾಸಕರು, ಕಾಂಗ್ರೆಸ್ ಸೇರುತ್ತಾರೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಕಿಡಿ ಕಾರಿದ ಸಚಿವರು ಪಕ್ಷ ಬಿಡಲು ತಲೆ ಕೆಟ್ಟಿರಬೇಕಷ್ಟೆ ಎಂದು ಹೇಳಿದರು.
ಮಾನವ ಸಂಪನ್ಮೂಲ ಒಳಗೊಂಡಂತೆ, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವರು, ಜಿಲ್ಲೆಯಲ್ಲಿ ಶಾಸಕರೂ ಸೇರಿದಂತೆ, ಎಲ್ಲಾ ಜನಪ್ರತಿನಿಧಿ ಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸುತ್ತೇನೆ ಎಂದರು.
