ಧನುಷ್-ಐಶ್ವರ್ಯಾ ಡೈವೋರ್ಸ್ ಪಡೆದಿಲ್ಲ: ಅಚ್ಚರಿ ಮೂಡಿಸಿದ ಧನುಷ್ ತಂದೆಯ ಹೇಳಿಕೆ

ಕಳೆದ ಸೋಮವಾರದಿಂದ ಸೋಷಿಯಲ್ ಮೀಡಿಯಾ, ಮಾದ್ಯಮ ಸೇರಿದಂತೆ ಪ್ರತಿಯೊಂದು ಕಡೆಯೂ ನಟ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಡಿವೋರ್ಸ್ ಬಗ್ಗೆಯೆ ಹೆಚ್ಚು ಸುದ್ದಿಯಾಗ್ತಿದೆ. ಸಾಮಾಜಿಕ ಜಾಲ ತಾಣದಲ್ಲಿ ತಾವಿಬ್ಬರು ಬೇರೆ ಬೇರೆಯಾಗ್ತಿರೋದಾಗಿ ಈ ಜೋಡಿಗಳು ಹೇಳಿಕೊಂಡಿದ್ದರು. ಆದರೆ ಇದೀಗ ಧನುಷ್ ತಂದೆಯ ಹೇಳಿಕೆಯೊಂದು ಅಚ್ಚರಿಗೆ ಕಾರಣವಾಗಿದೆ.
ಕಳೆದ 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಧನುಷ್ ಹಾಗೂ ಐಶ್ವರ್ಯಾ ಕಳೆದ ಸೋಮವಾರ ದೂರದೂರವಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಬ್ಬರ ಮಧ್ಯೆ ವೈಮನಸ್ಸು ಮೂಡಿದ್ದು ಇದೇ ಕಾರಣಕ್ಕೆ ತಾವಿಬ್ಬರು ಬೇರೆ ಬೇರೆಯಾಗ್ತಿರೋದಾಗಿ ತಿಳಿಸಿದ್ದರು. ಅದರೆ ಧನುಷ್ ತಂದೆ ಕಸ್ತೂರಿ ರಾಜ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.
ಮಗ-ಸೊಸೆಯ ಡಿವೋರ್ಸ್ ಸುದ್ದಿಯನ್ನ ಕಸ್ತೂರಿ ರಾಜ ತಳ್ಳಿ ಹಾಕಿದ್ದಾರೆ. ಪರಸ್ಪರ ವೈಮನಸ್ಸಿನ ಕಾರಣಕ್ಕೆ ಹೀಗೆ ಆಗಿದೆ. ಇದು ಒಂದು ಕುಟುಂಬದ ಜಗಳ ಅಷ್ಟೇ. ಗಂಡ-ಹೆಂಡತಿ ನಡುವೆ ಇದೆಲ್ಲ ಸಹಜ. ಇದು ಡಿವೋರ್ಸ್ ಅಲ್ಲ. ಅವರಿಬ್ಬರು ಈಗ ಚೆನ್ನೈನಲ್ಲಿ ಇಲ್ಲ. ಹೈದರಾಬಾದ್ನಲ್ಲಿ ಇದ್ದಾರೆ. ಅವರಿಗೆ ನಾನು ಒಂದಷ್ಟು ಸಲಹೆ ನೀಡಿದ್ದೇನೆ ಎಂದು ಕಸ್ತೂರಿ ರಾಜ ಹೇಳಿದ್ದಾರೆ.
18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜೊತೆಗಿದ್ದೆವು. ಈ ಹಾದಿಯನ್ನ ಇಬ್ಬರೂ ಬೆಳೆದೆವು. ಅರ್ಥ ಮಾಡಿಕೊಂಡೆವು ಹಾಗೂ ಹೊಂದಾಣಿಕೆಯನ್ನ ಕಲಿತುಕೊಂಡೆವು. ಈಗ ಇಬ್ಬರೂ ಭಿನ್ನ ದಾರಿಗಳಲ್ಲಿ ನಿಂತಿದ್ದೇವೆ. ನಾವಿಬ್ಬರೂ ಬೇರೆ ಬೇರೆಯಾಗಿ ನಮ್ಮನ್ನು ನಾವು ಸ್ವತಂತ್ರ ವ್ಯಕ್ತಿಗಳಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೇವೆ. ದಯವಿಟ್ಟು ನಮಗೆ ಈ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಖಾಸಗಿತನವನ್ನ ನೀಡಿ, ನಮ್ಮನ್ನು ಅರ್ಥಮಾಡಿಕೊಳ್ಳಿ ಎಂದು ಇಬ್ಬರು ಪತ್ರದಲ್ಲಿ ಕೇಳಿಕೊಂಡಿದ್ದರು.
