Breaking NewsLatestವಿದೇಶಸುದ್ದಿ

ಕೊರೊನಾ ವೈರಸ್ ಬಗ್ಗೆ ಸೌಮ್ಯ ಸ್ವಾಮಿನಾಥನ್ ಎಚ್ಚರಿಕೆ

ಕಳೆದ ಕೆಲ ದಿನಗಳಿಂದ ಕೋವಿಡ್ ಕೇಸ್​​ಗಳು ಕಡಿಮೆಯಾಗುತ್ತಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ. ಇನ್ನೆನ್ನೂ ಕೊರೊನಾ ದೂರವಾಗೆ ಬಿಡ್ತು ಎಂದು ನೆಮ್ಮದಿಯಾಗಿರೋ ಜನರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ವೈರಸ್ ವಿಕಸನಗೊಳ್ಳುವುದನ್ನು, ರೂಪಾಂತರಗೊಳ್ಳುವುದನ್ನ ನಾವು ನೋಡಿದ್ದೇವೆ. . ನಾವು ಸಾಂಕ್ರಾತಿಕ ರೋಗದ ಅಂತ್ಯದಲ್ಲಿಲ್ಲ. ಹಾಗಾಗಿ ಹೆಚ್ಚಿನ ರೂಪಾಂತರಗಳ ಬಗ್ಗೆ ಹೆಚ್ಚಿನ ಖಾಳಜಿಯ ಅಗತ್ಯವಿದೆ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಡಬ್ಲುಎಚ್​ಒ ಡೈರೆಕ್ಟರ್ ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರೊಂದಿಗೆ ಲಸಿಕೆ ತಯಾರಿಕಾ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಸೌಮ್ಯ ಸ್ವಾಮಿನಾಥನ್ ಮಾತನಾಡಿದ್ದಾರೆ. ಹೊಸ ಕೊವಿಡ್ 19 ರೂಪಾಂತರಗಳನ್ನ ವೈಲ್ಡ್ ಕಾರ್ಡ್ ಎಂದಿರುವ ಸೌಮ್ಯ ಸ್ವಾಮಿನಾಥನ್ ನಮಗೆ ಈ ವೈರಸ್ ಬಗ್ಗೆ ಸಾಕಷ್ಟು ಗೊತ್ತಿದೆ, ಆದರೆ ಸಂಪೂರ್ಣವಾಗಿ ಗೊತ್ತಿಲ್ಲ ಎಂದರು.

ಇದೇ ವೇಳೆ ಮಾತನಾಡಿದ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಹಾಗೂ ತಾಂತ್ರಿಕ ಸಮಿತಿಯ ಲೀಡ್ ಆಗಿರುವ ಮಾರಿಯಾ ಡಾ. ವ್ಯಾನ್ ಕೆರ್ಕೋವ್ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನ ಹೆಚ್ಚಿಸುವ ಅಗತ್ಯವಿದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button