Latestಮನರಂಜನೆಸಿನಿಮಾಸೆಲೆಬ್ರಿಟಿ

ಕೆಟ್ಟ ಪದ ಪ್ರಯೋಗಿಸಿದವನಿಗೆ ನಟಿ ಸಮಂತಾ ತಿರುಗೇಟು

ಟಾಲಿವುಡ್ ನಟಿ ಸಮಂತಾ ಋತ್ ಪ್ರಭು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಚಿತ್ರರಂಗ ಹಾಗೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಎದುರಿಸಿರೋ ಸಮಂತ ಇವೆಲ್ಲವುಗಳಿಂದ ಹೊರ ಬಂದು ವೃತ್ತಿ ಜೀವನದತ್ತ ಫೋಕಸ್ ಮಾಡ್ತಿದ್ದಾರೆ. ಈ ಮಧ್ಯೆ ಕೆಲ ಕಿಡಿಗೇಡಿಗಳು ಸಮಂತಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದು ಇದೀಗ ನೆಟ್ಟಿಗರೊಬ್ಬನಿಗೆ ಸಮಂತಾ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ನಟ ನಾಗಚೈತನ್ಯರಿಂದ ದೂರವಾಗಿರೋ ಸಮಂತ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸಮಂತಾಗೆ ಪರಭಾಷೆಯಿಂದಲೂ ಸಾಕಷ್ಟು ಆಫರ್​ಗಳು ಬರ್ತಿದ್ದು ಅಳೆದು ತೂಗಿ ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ. ಈ ಮಧ್ಯೆ ಸಮಂತ ಸೊಷಿಯಲ್ ಮೀಡಿಯಾದಲ್ಲು ಸಖತ್ ಆಕ್ಟೀವ್ ಆಗಿದ್ದು ಆಗಾಗ ತಮ್ಮ ಅಭಿಪ್ರಾಯವನ್ನ ಹಂಚಿಕೊಳ್ತಿರ್ತಾರೆ. ಇತ್ತೀಚೆಗೆ ಸಮಂತ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೋತ್ತರಾವಳಿ ನಡೆಸಿದ್ರು. ಈ ವೇಳೆ ಕೀಳಾಗಿ ಕಾಮೆಂಟ್ ಮಾಡಿದ ವ್ಯಕ್ತಿಯನ್ನ ಸಮಂತಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಭಿಮಾನಿಗಳ ಸಾಕಷ್ಟು ಪ್ರಶ್ನೆಗೆ ಸಮಂತ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ನೆಟ್ಟಿಗನೋಬ್ಬ ‘ನೀವು ಸಂತಾನೋತ್ಪತ್ತಿ(ರಿಪ್ರೊಡ್ಯೂಸ್) ಮಾಡಿದ್ದೀರಾ? ಕಾರಣ ನಾನು ನಿಮ್ಮನ್ನು ರಿಪ್ರೊಡ್ಯೂಸ್ ಮಾಡಬೇಕು’ ಎಂದು ಬರೆದಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದರು ಸಮಂತಾ `ರಿಪ್ರೊಡ್ಯೂಸ್ ಎಂಬ ಪದವನ್ನು ಒಂದು ವಾಕ್ಯದಲ್ಲಿ ಹೇಗೆ ಬಳಸಬೇಕು? ನಾವು ಮೊದಲು ಅದನ್ನು ಗೂಗಲ್ ಮಾಡಬೇಕಾ?’ ಎಂದು ಮರುಪ್ರಶ್ನಿಸಿದ್ದಾರೆ. ಈ ಮೂಲಕ ಆತನಿಗೆ ವ್ಯಂಗ್ಯವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ನೆಟ್ಟಿಗರೊಬ್ಬರು ಯುವಜನತೆಗೆ ಸಮಂತಾ ಬಳಿ ಸಲಹೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟಿ ಬಿಡುವು ತೆಗೆದುಕೊಂಡು ಕೆಲಸ ಮಾಡಿ ಎಂದಿದ್ದಾರೆ. ಮತ್ತೋರ್ವ ಅಭಿಮಾನಿ ಸಿನಿಮಾ ನಿರ್ದೇಶನ ಮಾಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸ್ಯಾಮ್ ಇಲ್ಲ ಎಂದು ಹೇಳಲಾರೆ ಎಂದಿದ್ದಾರೆ. ಜೊತೆಗೆ ನಿಮ್ಮ ಜೀವನದ ಉದ್ದೇಶ ಏನು ಎಂಬ ಪ್ರಶ್ನೆಗೆ ಎಲ್ಲರೂ ನೆನಪಿಟ್ಟುಕೊಳ್ಳುವಂತಾಗಬೇಕು ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button