Latestಆರೋಗ್ಯಮೆಟ್ರೋವಾಣಿಜ್ಯ

ಕೋವಿಡ್ ನಿಯಂತ್ರಣಕ್ಕೆ ಗಿಡಮೂಲಿಕೆ ಆಧಾರಿತ ಕ್ಯಾಪ್ಸುಲ್

ಬೆಂಗಳೂರು: ರಾಜಧಾನಿ ಬೆಂಗಳೂರು ಮೂಲದ ಗಿಡ ಮೂಲಿಕೆ ಆಧಾರಿತ ಸಂಸ್ಥೆಯೊಂದು ಕೊರೋನಾ ವೈರಾಣು ನಿಯಂತ್ರಿಸುವ ಕ್ಯಾಪ್ಸುಲ್ ಬಿಡುಗಡೆ ಮಾಡಿದೆ. ಅಟ್ರಿಮೆಡ್ ಫಾರ್ಮಾಸ್ಯುಟಿಕಲ್ಸ್ ಹೆಸರಿನ ಸಂಸ್ಥೆ ವೈವುಜ್ ಹೆಸರಿನ ಕ್ಯಾಪ್ಸುಲ್  ಬಿಡುಗಡೆ ಮಾಡಿದ್ದು ಕೋವಿಡ್ ವೈರಾಣು ಹತೋಟಿಯಲ್ಲಿಡಲು ಇದು ಸಹಕಾರಿ ಎನ್ನಲಾಗಿದೆ.

ಕೋವಿಡ್ ತಡೆಯುವ ಲಸಿಕೆ ಪಡೆದಿರುವವರು ಈ ಕ್ಯಾಪ್ಸುಲ್ ಸೇವಿಸುದರಿಂದ ವೈರಾಣು ಪುನರಾವರ್ತನೆ ತಡೆಯುವಲ್ಲಿ ಇದು ಪರಿಣಾಮಕಾರಿ. ಕೇಂದ್ರದ ಜೈವಿಕ ತಂತ್ರಜ್ಞಾನ ಪ್ರಯೋಗಾಲಯಗಳಲ್ಲಿ ಕೋವಿಡ್ ವೈರಾಣು ನಿಯಂತ್ರಣದ ಈ ಕ್ಯಾಪ್ಸುಲ್ಲನ್ನು ಪರೀಕ್ಷಿಸಲಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ (ಸಿಇಓ)ಡಾ.ಹೃಷಿಕೇಶ್ ದಾಮ್ಲೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್ ಡೆಲ್ಟಾ ರೂಪಾಂತರದ ವಿರುದ್ದದ ಸೂತ್ರೀಕರಣವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದ್ದು ಪರಿಣಾಮಕಾರಿ ಎಂಬ ಫಲಿತಾಂಸ ಬಂದಿದೆ ಎಂದೂ ಅವರು ಹೇಳಿದರು.

ಕ್ಯಾಪ್ಸುಲಿನ ರಾಸಾಯನಿಕ ಸೂತ್ರೀಕರಣವನ್ನು ಆಯುರ್ವೇದದಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುವ ಸೆಂಟೆಲ್ಲಾ ಏಷಿಯಾಟಿಕಾ (ಮುಥಿಲ್), ವಿಥನಿಯಾ ಸೋಮ್ನಿಫೆರಾ (ಅಶ್ವಗಂಥ) ಮತ್ತು ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲಾಟಾ (ಕಿರಿಯಾತ)ಮತ್ತಿತರ ಔಷಧೀಯ ಸಸ್ಯಗಳ ಸಸ್ಯದ ಸಾರಗಳನ್ನು ಬಳಸಿ ತಯಾರಿಸಲಾಗುತ್ತದೆ ಎಂದು ಡಾ.ದಾಮ್ಲೆ ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button