Latestಮನರಂಜನೆಸಿನಿಮಾಸೆಲೆಬ್ರಿಟಿ

ಪದ್ಮಶ್ರೀ ನಿರಾಕರಿಸಿದ ಗಾಯಕಿ ಸಂಧ್ಯಾ ಮುಖರ್ಜಿ ನಿಧನ

ಲೆಜೆಂಡರಿ ಬೆಂಗಾಲಿ ಹಿರಿಯ ಗಾಯಕಿ ಸಂಧ್ಯಾ ಮುಖ್ಯೋಪಾಧ್ಯಾ ಎಂದೇ ಗುರುತಿಸಿಕೊಂಡಿದ್ದ ಸಂಧ್ಯಾ ಮುಖರ್ಜಿ ನಿಧನರಾಗಿದ್ದಾರೆ. ಸೋಮವಾರ(ಫೆ.14ನ) ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾಗಿ ಸಂಧ್ಯಾ ಮುಖರ್ಜಿ ದಾಖಲಾಗಿದ್ದ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯ ಹಾಗೂ ಮೂಳೆ ಮುರಿತಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


90 ವರ್ಷ ವಯಸ್ಸಿನ ಸಂಧ್ಯಾ ಮುಖರ್ಜಿ ಜನವರಿ ಕೊನೆಯ ವಾರದಲ್ಲಿ ಅಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ನಿನ್ನೆ ರಾತ್ರಿ 7.30ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದ್ದಾರೆ.


ಸುಮಾರು ಎಂಟು ದಶಕಗಳ ಕಾಲ ತಮ್ಮ ಗಾಯನದ ಮೂಲಕ ಕೋಟ್ಯಾಂತರ ಶೋತ್ರುಗಳ ಕವಿ ಇಂಪಾಗಿಸಿದ್ದ ಗಾಯಕಿ ಸಂಧ್ಯಾ ಮುಖರ್ಜಿ. 2022-23ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಸಂಧ್ಯಾ ಮುಖರ್ಜಿ ಆಯ್ಕೆಯಾಗಿದ್ದರು. ಆದರೆ ಪ್ರಶಸ್ತಿಯನ್ನ ಸಂಧ್ಯಾ ಮುಖರ್ಜಿ ನಯವಾಗಿಯೇ ತಿರಸ್ಕರಿಸಿದ್ರು.


ತಾನು ಪ್ರಶಸ್ತಿ ಸ್ವೀಕರಿಸುವುದಿಲ್ಲ. 90ನೇ ವಯಸ್ಸಿನಲ್ಲಿ ನನಗೆ ಮಾಡುತ್ತಿರುವ ಅವಮಾನ ಇದು. ನನಗಿಂತ ಕಿರಿಯ ಕಲಾವಿದರಿಗೆ ಇದರ ಅವಶ್ಯಕತೆ ಹೆಚ್ಚಾಗಿದೆ. ಅಂತಹವರಿಗೆ ಈ ಪ್ರಶಸ್ತಿಯನ್ನ ನೀಡುವಂತೆ ಸಂದ್ಯಾ ಮುಖರ್ಜಿ ಕೇಳಿಕೊಂಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button