Breaking NewsLatestಮನರಂಜನೆಸಿನಿಮಾಸ್ಯಾಂಡಲ್ ವುಡ್

ಏಪ್ರಿಲ್ ನಲ್ಲಿ ಉಪೇಂದ್ರ ನಟನೆಯ ಹೋಮ್ ಮಿನಿಸ್ಟರ್ ರಿಲೀಸ್

ಕಳೆದ ಮೂರು ವರ್ಷಗಳ ಹಿಂದೆ ಉಪೇಂದ್ರ ನಟನೆಯ ಐ ಲವ್​ ಯೂ ಸಿನಿಮಾ ಬಿಡುಗಡೆಯಾಗಿ ಭಾರಿ ಧೂಳೆಬ್ಬಿಸಿತ್ತು. ನಂತರ ಅವರ ಯಾವ ಸಿನಿಮಾವೂ ರಿಲೀಸ್ ಆಗಲಿಲ್ಲ. ಸದ್ಯ ಅವರ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ . ಇದೀಗ ಉಪೇಂದ್ರ ನಟನೆಯ ಹೋಮ್ ಮಿನಿಸ್ಟರ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಗಳಿಂದಲೇ ಭಾರಿ ಸಂಚಲನ ಮೂಡಿಸಿದೆ. ಈ ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ವೇದಿಕಾ ಕಾಣಿಸಿಕೊಂಡಿದ್ದಾಳೆ. ಇದೀಗ ಉಪೇಂದ್ರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಸಿನಿಮಾದ ರಿಲೀಸ್​ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಏಪ್ರಿಲ್‌‌ 1ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ರಿಲೀಸ್​ ದಿನಾಂಕ ಘೋಷಣೆ ಮಾಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಸೂಪರ್ ಸ್ಟಾರ್ ಉಪೇಂದ್ರ ಅವರು ಚಿತ್ರದ ರಿಲೀಸ್​ ದಿನಾಂಕ ಇರುವ ಪೋಸ್ಟರ್​ಅನ್ನು ಅನಾವರಣಗೊಳಿಸಿದರು.

ಇದೇ ವೇಳೆ ನಟ ಉಪೇಂದ್ರ ಮಾತನಾಡಿ, ಈ ಸಿನಿಮಾದಲ್ಲಿ ಮಾಡಿರುವ ಪಾತ್ರವನ್ನು ಇದುವರೆಗೂ ನಾನು ಮಾಡಿಲ್ಲ. ಇಲ್ಲಿನ ನಿರ್ಮಾಪಕರು ‌ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.‌ ತೆಲುಗಿನ ಇನ್ನೂ ನೂರು ನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಬೇಕು. ಆ ರೀತಿಯಲ್ಲಿ ‘ಹೋಮ್ ಮಿನಿಸ್ಟರ್’ ಚಿತ್ರವನ್ನು ಯಶಸ್ವಿ ಮಡೋಣ ಎಂದರು.

ಬಹಳ ದಿನಗಳ ನಂತರ ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಜತೆ ಮಾತನಾಡಲು ಖುಷಿಯಾಗುತ್ತಿದೆ. ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನಾನು ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ವೇದಿಕಾ.

Spread the love

Related Articles

Leave a Reply

Your email address will not be published. Required fields are marked *

Back to top button