Breaking NewsLatestಮನರಂಜನೆಸಿನಿಮಾಸ್ಯಾಂಡಲ್ ವುಡ್

ವಿದ್ಯಾರ್ಥಿ ನವೀನ್ ಅಗಲಿಕೆಗೆ ಚಿತ್ರರಂಗ ಕಂಬನಿ

ರಷ್ಯಾ ಶೆಲ್ ದಾಳಿಗೆ ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಈ ಕುರಿತು ನಟಿ,ಮಾಜಿ ಸಂಸದೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ನಿಮ್ಮನ್ನು ಕಳೆದುಕೊಂಡಿರುವ ತಂದೆ ತಾಯಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು ನಟ ನೀನಾಸಂ ಸತೀಶ್ ಕೂಡ ನವೀನ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಎದೆಯುದ್ದ ಬೆಳೆದ ಮಕ್ಕಳನ್ನು ತಂದೆ ತಾಯಿಗಳು ಕಳೆದುಕೊಂಡಾಗಿನ ದುಃಖ ಯಾರಿಗೂ ಬರಬಾರದು. ನವೀನ್ ವೈದ್ಯನಾಗಿ ಅದೆಷ್ಟೋ ಜೀವ ಉಳಿಸುತ್ತಿದ್ದ, ಇದೀಗ ಯುದ್ಧದಾಹಿಗಳ ದಾಹಕ್ಕೆ ಬಲಿಯಾಗಿದ್ದಾರೆ. ಅವರ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ಬರಲಿ ಎಂದಿದ್ದಾರೆ.

ಇತ್ತ ನಟ, ನಿರ್ಮಾಪಕ ಬಿ.ಸಿ.ಪಾಟೀಲ್ ಕೂಡ ಮೃತ ನವೀನ್ ಗಾಗಿ ಕಂಬನಿ ಮಿಡಿದಿದ್ದಾರೆ. ನವೀನ್ ಜ್ಞಾನಗೌಡರ್ ಮೃತಪಟ್ಟ ಸುದ್ದಿ ಅತೀವ ದುಃಖ ತಂದಿದೆ. ಅವರು ಕುಟುಂಬಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿಎಂದು ಟ್ವಿಟ್ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button