Breaking NewsLatestರಾಷ್ಟ್ರೀಯಸುದ್ದಿ
ಭೀಕರ ರಸ್ತೆ ಅಪಘಾತ: ಮೂವರು ಯಾತ್ರಿಗಳು ಸಾವು

ಬೆಂಗಳೂರು: ಕರ್ನಾಟಕದಿಂದ ಶಬರಿಮಲೆಗೆ ಹೊರಟಿದ್ದ ಟೆಂಪೊ ಟ್ರಾವೆಲರ್ ವಾಹನ ಅಪಘಾತಕ್ಕೀಡಾಗಿದೆ. ಪರಿಣಾಮವಾಗಿ ವಾಹನದಲ್ಲಿದ್ದ 11 ಯಾತ್ರಿಗಳು ಗಂಭೀರವಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಕೇರಳದ ಕೋಝಿಕ್ಕೋಡ್ ನ ಪುರಕ್ಕಾಟ್ಟಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಪುರಕ್ಕಾಟ್ಟಿರಿಯ ಪುಲದಿಕುನ್ನು ಬೈಪಾಸ್ ಬಳಿ ಟಿಪ್ಪರ್ ಲಾರಿ ಮತ್ತು ಟೆಂಪೊ ಟ್ರಾವೆಲರ್ ಡಿಕ್ಕಿಯಾಗಿದೆ. ಕರ್ನಾಟಕದವರು ಶಬರಿಮಲೆಗೆ ಹೊರಟಿದ್ದರು. ಈ ವೇಳೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 3 ಸಾವನ್ನಪ್ಪಿದ್ದು,11 ಯಾತ್ರಿಗಳಿಗೆ ಗಾಯವಾಗಿದೆ. ಸದ್ಯ ಗಾಯಾಳುಗಳನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.
