Latestರಾಜಕೀಯರಾಷ್ಟ್ರೀಯಸುದ್ದಿ

ಆಂಧ್ರದಲ್ಲಿ 13 ಹೊಸ ಜಿಲ್ಲೆಗಳ ರಚನೆ

ಅಮರಾವತಿ: ಆಡಳಿತ ವಿಕೇಂದ್ರೀಕರಣದ ಮಹತ್ವದ ಬೆಳವಣಿಗೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ 13 ಹೊಸ ಜಿಲ್ಲೆಗಳನ್ನು ರಚಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಆಂಧ್ರದಲ್ಲಿ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿದಂತಾಗಿದೆ. ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದ್ದು, ಬರುವ ಏಪ್ರಿಲ್ ನಲ್ಲಿ ತೆಲುಗು ಹೊಸ ವರ್ಷಕ್ಕೆ ಹೊಸ ಜಿಲ್ಲೆಗಳನ್ನು ರಚಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಹೊಸದಾಗಿ ರಚನೆಯಾದ ಜಿಲ್ಲೆಗಳೆಂದರೆ, ಮಾನ್ಯಂ, ಅಲ್ಲೂರಿ, ಅನಕಾಪಲ್ಲಿ, ಕಾಕಿನಾಡ, ಕೋನ ಸೀಮಾ, ಏಲೂರು, ಎನ್ಟಿಆರ್, ಬಾಪಟ್ಲ, ವಲ್ನಾಡು, ನಡ್ಯಾಲ್, ಶ್ರೀಸಾಯಿ, ಅನ್ನಮಯ್ಯ ಮತ್ತು ಬಾಲಾಜಿ ಜಿಲ್ಲೆಗಳು ಹೊಸದಾಗಿ ರಚನೆಯಾಗಿವೆ.

ಆಂಧ್ರ ಪ್ರದೇಶ ಜಿಲ್ಲೆಗಳ ಕಾಯಿದೆ ಸೆಕ್ಷನ್ 3(5)ರ ಅಡಿಯಲ್ಲಿ, ಆಡಳಿತಾತ್ಮಕ ಉದ್ದೇಶಗಳಿಗಾಗಿ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ. ಅವಿಭಜಿತ ಆಂಧ್ರ ಪ್ರದೇಶದಿಂದ ತೆಲಂಗಾಣ ಬೇರ್ಪಟ್ಟ ನಂತರ ಅಮರಾತಿಯನ್ನು ಆಂಧ್ರ ತನ್ನ ರಾಜಧಾನಿಯಾಗಿ ಸ್ಥಾಪಿಸಿತು.

Spread the love

Related Articles

Leave a Reply

Your email address will not be published. Required fields are marked *

Back to top button