Latestಆಹಾರಲೈಫ್ ಸ್ಟೈಲ್

ಭಾನುವಾರ ಬಾಡೂಟಕ್ಕೆ ಮಟನ್ ರೋಸ್ಟ್ ರೆಸಿಪಿ ಟ್ರೈ ಮಾಡಿ

ಸಾಮಾನ್ಯವಾಗಿ ಸಸ್ಯಹಾರಿಗಿಂತ ಮಾಂಸಾಹಾರಿಗಳನ್ನು ತುಂಬಾ ಜನರು ಇಷ್ಟ ಪಡುತ್ತಾರೆ. ಭಾನುವಾರ ಬಂತು ಅಂದರೆ ಸಾಕು ಮನೆಯಲ್ಲಿ ಬಾಡೂಟ ರೆಡಿಯಾಗಿರುತ್ತೆ. ಬಿರಿಯಾನಿ ಎಂದರೆ ಸಾಕು ಬಾಯಿಯಲ್ಲಿ ನೀರು ಬಂದುಬಿಡುತ್ತೆ. ಅದರಲ್ಲೂ ವಿಧ ವಿಧವಾಗಿ ಚಿಕನ್, ಮಟನ್, ಮೊಟ್ಟೆ ಬಿರಿಯಾನಿ ಮಾಡುತ್ತಾರೆ. ಆದರೆ ಮಟನ್ ನಿಂದ ತಯಾರು ಆಗುವ ಮಟನ್ ರೋಸ್ಟ್ ಒಮ್ಮೆ ಟ್ರೈ ಮಾಡಿ ನೋಡಿ. ಬಲು ರುಚಿಕರವಾಗಿರುತ್ತದೆ.


ಬೇಕಾಗುವ ಸಾಮಾಗ್ರಿಗಳು
ಮಟನ್- 1 ಕೆಜಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್-
ಮೆಣಸಿನ ಹುಡಿ-1 ಚಮಚ
ಹಸಿಮೆಣಸಿನ ಕಾಯಿ-2
ದನಿಯಾ- 2 ಚಮಚ
ಅರಿಶಿನ ಹುಡಿ-1 ಚಮಚ
ಈರುಳ್ಳಿ -1
ತೆಂಗಿನೆಣ್ಣೆ- ಅರ್ಧ ಕಪ್
ಕರಿಬೇವು ಸೊಪ್ಪು-ಸ್ವಲ್ಪ

ತೆಂಗಿನಕಾಯಿ-ಸ್ವಲ್ಪ
ಸೋಂಪು ಕಾಳು ಹುಡಿ-1 ಚಮಚ
ಗರಂ ಮಸಾಲ-1 ಚಮಚ
ಕಾಳುಮೆಣಸು- ಸ್ವಲ್ಪ


ಮಾಡುವ ವಿಧಾನ:
1 ಕೆಜಿ ಮಟನ್ ಹಾಕಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸಿನ ಹುಡಿ, ಅರಿಸಿನ ನೀರು ಹಾಕಿ ಬೇಯಿಸಿಕೊಳ್ಳಬೇಕು.ನಂತರ ಒಂದು ಬಾಣಲೆಗೆ ತೆಂಗಿನೆಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕರಿಬೇವು, ತೆಂಗಿನಕಾಯಿ ಹಾಕಿ ಕಂದು ಬಣ್ಣ ಆಗುವರೆಗೂ ಹುರಿಯಿರಿ.ಈಗ ಹಸಿಮೆಣಸಿನ ಕಾಯಿ, ಈರುಳ್ಳಿ, ಅರಿಸಿಣ, ಖಾರದ ಪೌಡರ್, ದನಿಯಾ ಪೌಡರ್, ಸೋಂಪುಕಾಳು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.ನಂತರ ಅದಕ್ಕೆ ಬೇಯಿಸಿದ ಮಟನ್, ಗರಂ ಮಸಾಲೆ, ಕಾಳುಮೆಣಸಿನ ಹುಡಿ ಸೇರಿಸಿ ಮಟನ್ ಕಂದು ಬಣ್ಣ ಆಗುವರೆಗೂ ಕೈಯಾಡಿಸುತ್ತಾ, ಚೆನ್ನಾಗಿ ರೋಸ್ಟ್ ಮಾಡಿದರೆ ರುಚಿಯಾದ ಮಟನ್ ಸವಿಯಲು ರೆಡಿಯಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button