Latestಕ್ರಿಕೆಟ್ಕ್ರೀಡೆ

AB de Villiers: ಎಲ್ಲಾ ಬಗೆಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಎಬಿ ಡಿವಿಲಿಯರ್ಸ್

ನವದೆಹಲಿ : ರಾಯಲ್​​​ ಚಾಲೆಂಜರ್ಸ್​​​ ಬೆಂಗಳೂರು ಪರ ಐಪಿಎಸ್​​​ ನಲ್ಲಿ ಆಡುತ್ತಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಎ ಬಿ ಡಿವಿಲಿಯರ್ಸ್​​​​ ಎಲ್ಲಾ ಮಾದರಿಯ ಕ್ರಿಕೆ್ಡ್​ನಿಂದ ನಿವೃತ್ತಿ ಘೊಷಿಸಿದ್ದಾರೆ.

2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಬಿ ಡಿವಿಲಿಯರ್ಸ್ ನಿವೃತ್ತಿ ಘೋಷಣೆ ಮಾಡಿದರು. ಆದರೆ ದೇಶಿಯ ಪಂದ್ಯಗಳಲ್ಲಿ ಆಡುತ್ತಿದ್ದ ಎಬಿ ಡಿವಿಲಿಯರ್ಸ್ ಈಗ ಇದ್ದಕ್ಕಿದ್ದಂತೆ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮೊಗದಲ್ಲಿ ಎಬಿ ಡಿವಿಲಿಯರ್ಸ್ ಬೇಸರ ಮೂಡಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಿವೃತ್ತಿಯಾಗುತ್ತಿರುವ ಬಗ್ಗೆ ಎಬಿ ಡಿವಿಲಿಯರ್ಸ್ ಘೋಷಣೆ ಮಾಡಿದ್ದಾರೆ.

ಬಾಲ್ಯದಲ್ಲಿ ಸೋದರರ ಜೊತೆಗೆ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದ ಆನಂದ ಹಾಗೂ ಉತ್ಸಾಹದಿಂದಲೇ ಈವರೆಗೂ ಆಡಿದ್ದೇನೆ. ಆದರೆ ಈಗ 37ನೇ ವಯಸ್ಸಿನಲ್ಲಿ ನನಗೆ ತುಂಬಾ ಪ್ರಖರವಾಗಿ ಬೆಳಗಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಸತ್ಯವನ್ನು ನಾನು ಒಪ್ಪಿಕೊಳ್ಳಬೇಕಿದೆ. ಎಲ್ಲ ಬಗೆಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ ಮಾಡುತ್ತಿರುವುದು ತಕ್ಷಣದ ನಿರ್ಧಾರದಂತೆ ಅನಿಸಿದರೂ ಈ ನಿರ್ಧಾರವನ್ನು ತೆಗೆದುಕೊಳ್ಳಲು ನಾನು ಸಮಯ ತೆಗೆದುಕೊಂಡಿದ್ದೇನೆ. ಚಿಕ್ಕಂದಿನಿಂದಲೂ ಕ್ರಿಕೆಟ್ ನನ್ನ ಮೇಲೆ ಅಸಾಧಾರಣವಾದ ಪ್ರಭಾವ ಬೀರಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಎಬಿಡಿ ಬರೆದುಕೊಂಡಿದ್ದಾರೆ.

ಎಬಿ ಡಿವಿಲಿಯರ್ಸ್ 114 ಟೆಸ್ಟ್‌, 228 ಓಡಿಐ ಹಾಗೂ 78 ಟಿ20 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 20,014 ಅಂತಾರಾಷ್ಟ್ರೀಯ ರನ್‌ಗಳನ್ನು ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, 184 ಐಪಿಎಲ್‌ ಪಂದ್ಯಗಳಾಡಿರುವ ಅವರು 39.7 ಸರಾಸರಿಯಲ್ಲಿ 5162 ರನ್ ಸಿಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button