ಜಿಲ್ಲಾ ಸುದ್ದಿಬಾಗಲಕೋಟೆ
ತುಂತುರು ಮಳೆ ಹಿನ್ನೆಲೆ: ಕೆಸರಲ್ಲಿ ಸಿಲುಕಿದ ಕೆಎಸ್ಆರ್ಟಿಸಿ ಬಸ್ : ಪ್ರಯಾಣಿಕರ ಪರದಾಟ

ಬಾಗಲಕೋಟೆ: ತುಂತುರು ಮಳೆ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಕೆಸರಿನಲ್ಲಿ ಸಿಲುಕಿ, ಪ್ರಯಾಣಿಕರು ಪರದಾಟ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ರಾಷ್ಟ್ರೀಯ ಹೆದ್ದಾರಿಯ ಬೈ ಪಾಸ್ ರಸ್ತೆಯಲ್ಲಿ ನಡೆದಿದೆ.
ಇಳಕಲ್ ನಗರದಿಂದ ಅಂಕನಾಳಗೆ ಹೋಗುವ ಇಳಕಲ್ ಡಿಪೋ ಬಸ್ ಇದಾಗಿದ್ದು, ಅಂಕನಾಳಕ್ಕೆ ಹೋಗುವ ರಸ್ತೆಯ ಕಾಮಗಾರಿ ನಡೆದಿದೆ, ತುಂತುರು ಮಳೆಯಿಂದ ರಸ್ತೆ ಕೆಸರು ಗದ್ದೆಯಂತಾಗಿತ್ತು, ಈ ವೇಳೆ ಬಂದಿರುವ ಕೆಎಸ್ಆರ್ಟಿಸಿ ಬಸ್ ಕೆಸರಲ್ಲಿ ಸಿಲುಕಿತ್ತು, ಬಸ್ ಚಾಲಕ ಎಷ್ಟೇ ಪ್ರಯತ್ನಪಟ್ಟರೂ ಬಸ್ ಕೆಸರಿನಿಂದ ಹೊರ ಬರಲಿಲ್ಲ.
ಈ ವೇಳೆ ಪ್ರಯಾಣಿಕರು ಪರದಾಡುವಂತಾಗಿತ್ತು. ನಂತರ ಪ್ರಯಾಣಿಕರು ಕೆಸರಲ್ಲೇ ಬಸ್ ಇಳಿದು ಬೇರೆ ಬೇರೆ ವಾಹನದ ಮೂಲಕ ತಮ್ಮ ತಮ್ಮ ಊರುಗಳಿಗೆ ತೆರಳಿದರು. ಟ್ರ್ಯಾಕ್ಟರ್ ಗೆ ಹಗ್ಗ ಕಟ್ಟಿ ಸಿಲುಕಿದ್ದ ಕೆಎಸ್ಆರ್ಟಿಸಿ ಬಸ್ ಹೊರ ತಗೆಯಲಾಯಿತು.




