
ಬಾಗಲಕೋಟೆ: ಚಾಮುಂಡೇಶ್ವರಿ ಜನ ನನ್ನನ್ನು ಕಳೆದ ಬಾರಿ ಸೋಲಿಸಿದರು. 5 ಬಾರಿ ಗೆದ್ದಿದ್ದೆ, ನನ್ನ ಊರು, ತಾಲೂಕು ಇರೋ ಕ್ಷೇತ್ರ ಅದು. ಅಲ್ಲಿ ನನ್ನನ್ನು ಸೋಲಿಸಿಬಿಟ್ಟರು. ಬಾದಾಮಿ ಜನ ಒಳ್ಳೆಯವರೆಂದು ಇಲ್ಲಿ ನಿಂತೆ. ನೀವು ನನ್ನನ್ನು ಗೆಲ್ಲಿಸಿದಿರಿ. ನಿಮ್ಮ ಋಣ ತೀರಸಬೇಕಲ್ಲ ಎಂದು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿನ ಕಹಿಯನ್ನು ಬಾದಾಮಿ ಜನರ ಬಳಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಕಾರ್ಮಿಕ ಇಲಾಖೆಯಡಿ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಭಾಷಣದ ಮಧ್ಯೆಯೇ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಹಾಕಿದರು. ನಾನು ವಿಪಕ್ಷ ನಾಯಕ. ಬಹಳ ಓಡಾಡಬೇಕಿದೆ. ಹೀಗಾಗಿ ನಾನು ಪದೇ ಪದೇ ಬಾದಾಮಿಗೆ ಬರಲಾರೆ. ನಾನು ಸಿಎಂ ಆಗಿದ್ದಾಗ, ಏನಾದ್ರೂ ನಾನು ಬಾದಾಮಿ ಶಾಸಕ ನಾನು ಆಗಿದ್ರೆ ನಿಮಗೆ ಬೇಕಾದ ಎಲ್ಲ ಅಭಿವೃದ್ಧಿ ಮಾಡಿ, ಎಲ್ಲ ವಿಕಾಸ ಮಾಡ್ತಿದ್ದೆ. ನಿಮ್ಮ ಆಶೀವಾ೯ದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.



