Latestಜಿಲ್ಲಾ ಸುದ್ದಿಶಿವಮೊಗ್ಗ
ಹರ್ಷ ಕೊಲೆ ಪ್ರಕರಣ: ಬಿಜೆಪಿ ಯುವ ಮೋರ್ಚಾದಿಂದ ಆರ್ಥಿಕ ನೆರವು

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್ ಪಾಟೀಲ್ ಮೃತ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಹರ್ಷ ಹಿಂದುತ್ವಕ್ಕಾಗಿ ಬದುಕಿದ ಹುಡುಗ, ಹತ್ಯೆ ಮಾಡಿದ ರಾಕ್ಷಸರನ್ನು ರಾಜ್ಯದಲ್ಲಿನ ಹಿಂದುತ್ವ ಸರ್ಕಾರ ಹುಡುಕಿ, ಶಿಕ್ಷೆ ನೀಡುವ ಕೆಲಸ ಮಾಡುತ್ತದೆ ಎಂದರು. ಇನ್ನು ಹರ್ಷ ಹತ್ಯೆಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಈಗಾಗಲೇ ಸಾಕಷ್ಟು ಗಣ್ಯರು ಕುಟುಂಬದವರಿಗೆ ಸಾಂತ್ವನ ಹೇಳಿದರು.



