
ಬಸವರಾಜ್ ಬೊಮ್ಮಾಯಿ ಅವರ ಸಂಪುಟ ರಚನೆ ಮತ್ತು ಈಗ ಖಾತೆ ಹಂಚಿಕೆಯ ನಂತರ ಕೆಲವೊಂದು ಮಹತ್ವದ ಬೆಳವಣಿಗಗಳಾಗಿವೆ,, ಕೆಲವರು ಸಂಪುಟ ರಚನೆ ಮತ್ತು ಖಾತೆ ಹಂಚಿಕೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ,, ಇದಕ್ಕಿಂತ ಮುಖ್ಯವಾದದ್ದು ಹಾಸನದ ಯುವ ಶಾಸಕ ಪ್ರೀತಂ ಗೌಡ ಅವರ ಹೇಳಿಕೆ,,, ದೇವೇಗೌಡ ಕುಟುಂಬದ ಜೊತೆ ಹೋರಾಟ ಮಾಡುತ್ತ ಬಂದ ಪ್ರೀತಂ ಹೊಂದಾಣಿಕೆ ರಾಜಕೀಯದಿಂದ ಬಲಿಪಶುವಾಗಿದ್ದಾರೆ,,, ಹೀಗೆ ಬಲಿಯಾದ ಮೂರನೆಯ ಒಕ್ಕಲಿಗ ನಾಯಕರು ಇವರು,, ಶರತ್ ಬಚ್ಚೇಗೌಡರಂತಹ ಉದಯೋನ್ಮುಖ ನಾಯಕನನ್ನು ಬಲಿ ಕೊಟ್ಟ ಬಿಜೆಪಿ ಈಗ ಸಿ.ಪಿ. ಯೋಗೀಶ್ವರರನ್ನು ಗೌಡರಿಗೆ ಬಲಿ ನೀಡಿತು,,, ಈಗ ಪ್ರೀತಂ ಗೌಡ, ದೇವೇಗೌಡರ ಕುಟುಂಬಕ್ಕೆ ಬಲಿಯಾಗುತ್ತಿರುವ ಮೂರನೆಯ ನಾಯಕರು,, ದಕ್ಷಿಣ ಕರ್ನಾಟಕವನ್ನು ದೇವೇಗೌಡರಿಗೆ ಹರಿವಾಣದಲ್ಲಿಟ್ಟು ಅರ್ಪಣೆ ಮಾಡಿದ ಬಿಜೆಪಿ ಈಗ ಉತ್ತರ ಕರ್ನಾಟಕ ಮತ್ತು ಕರಾವಳಿಯ ಲಿಂಗಾಯತ ಪಕ್ಷ ಮಾತ್ರ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಆತ್ಮಹತ್ಯೆ ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.



