Breaking NewsLatestಇತರ ಕ್ರೀಡೆಕ್ರೀಡೆ

ಒಲಿಂಪಿಕ್ಸ್​ನಲ್ಲಿ ಇತಿಹಾಸ ಬರೆದ ನೀರಜ್ ‘ಚಿನ್ನ’

ಟೋಕಿಯೋ: ನೀರಜ್ ಚೋಪ್ರಾ…. ನೀರಜ್ ಚೋಪ್ರಾ…..ಈ ಹೆಸರು ಇನ್ನು ಭಾರತದ ಕ್ರೀಡಾ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು…

ಟೋಕಿಯೋ ಒಲಿಂಪಿಕ್ಸ್ ನ ಜಾವಲಿನ್ ಎಸೆತದಲ್ಲಿ ನೀರಜ್ ಚೋಪ್ರಾ 87.58 ಮೀ.ದೂರಕ್ಕೆ ಎಸೆದು ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದರು.

ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವಿಶ್ವಜೂನಿಯರ್, ಏಷ್ಯನ್, ಕಾಮನ್ವೆಲ್ತ್ ಹಾಗೂ ಏಷ್ಯನ್ ಚಾಂಪಿಯನ್ಷಿಪ್ ಗಳಲ್ಲಿ ಚಿನ್ನ ಗೆದ್ದಿರುವ ನೀರಜ್ ಮೊದಲ ಎಸೆತದಲ್ಲಿ 87.03 ಮೀ ದೂರಕ್ಕೆ ಎಸೆದು ಉಳಿದ ಸ್ಪರ್ಧಿಗಳಿಗೆ ಬೆಳ್ಳಿಯ ಮೇಲೆ ಮಾತ್ರ ಗಮನವಿಡಿ, ಚಿನ್ನ ಈ ಬಾರಿ ನಮ್ಮದೇ ಎಂಬ ಸಂದೇಶ ರವಾನಿಸಿದರು. ಎರಡನೇ ಎಸೆತದಲ್ಲಿ ನೀರಜ್ 87.58 ಮೀ. ದೂರಕ್ಕೆ ಎಸೆದು ಚಿನ್ನದ ಪದಕವನ್ನು ಅಧಿಕೃತವಾಗಿ ತಮ್ಮದಾಗಿಸಿಕೊಂಡರು.

ಚಿನ್ನದ ಪದಕದೊಂದಿಗೆ ಭಾರತ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ 7 ಪದಕಗಳನ್ನು ಗೆದ್ದು ಸಂಭ್ರಮಿಸಿತು. ಭಾರತ ಇದುವರೆಗೂ 6 ಪದಕಗಳನ್ನು ಗೆದ್ದಿದ್ದೇ ದಾಖಲೆಯಾಗಿತ್ತು.

ಜೂನಿಯರ್ ವಿಭಾಗದಲ್ಲಿ ವಿಶ್ವದಾಖಲೆ ಬರೆದಾಗಲೇ ನೀರಜ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದರು.

ಅಭಿನಂದನೆಗಳ ಮಹಾಪೂರ:

ದೇಶಕ್ಕೆ ಚಿನ್ನ ತಂದ ನೀರಜ್ ಚೋಪ್ರಾ ಸಾಧನೆಯನ್ನು ದೇಶಕ್ಕೆ ದೇಶವೇ ಕೊಂಡಾಡುತ್ತಿದೆ. ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ರಾಷ್ಟ್ರಪತಿ ಕೋವಿಂದ್ ಅವರು, ಇತಿಹಾಸ ಸೃಷ್ಟಿಯಾಗಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನೀರಜ್ ಸಾಧನೆಯನ್ನು ಕೊಂಡಾಡಿ ಟ್ವೀಟ್ ಮಾಡಿದ್ದಾರೆ.

6 ಕೋಟಿ ನಗದು ಬಹುಮಾನ:

ನೀರಜ್​ಗೆ ಹರ್ಯಾಣ ಸರ್ಕಾರ 6 ಕೋಟಿ ನಗದು ಬಹುಮಾನ ಘೋಷಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button