Breaking NewsLatestದಾವಣಗೆರೆರಾಜಕೀಯರಾಜ್ಯ

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ; ಎಂಬಿ ಪಾಟೀಲ್​ಗೆ ಶಾಮನೂರು ತಿರುಗೇಟು

ದಾವಣಗೆರೆ: ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಎನ್ನುವವರು ಹೋರಾಟ ಮಾಡಲಿ. ಅವರು ಮಾಡ್ಕಂಡ್ರೆ ಏನೂ ಆಗಂಗಿಲ್ಲ. ಮತ್ತೆ ಕಚ್ಚಾಡ್ತಾರೆ. ಅದರ ಬಗ್ಗೆ ಹೆಚ್ಚು ಚರ್ಚೆ ಬೇಡ. “ಅವನೇನೋ ಹೋಗ್ತಾನೆ, ಅವ್ನ ಹಣೆಬರಹ” ಎಂದು ಹೇಳುವ ಮೂಲಕ ಶಾಸಕ ಎಂ. ಬಿ‌. ಪಾಟೀಲ್ ವಿರುದ್ಧ ಶಾಮನೂರು ಶಿವಶಂಕರಪ್ಪ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಯಕರಾಗಬೇಕು ಅಂತಾ ಬಹಳ ಜನ ಹೋಗ್ತಾರೆ. ನಾನು ಹೋಗಿ ನಾಯಕನಾಗಬೇಕೆಂದರೆ ಆಗುತ್ತಾ. ಜನರು ಆರಿಸಬೇಕು, ಒಪ್ಪಿಕೊಳ್ಳಬೇಕು ನಾಯಕರು ಅಂತ. ಜನರು ಇವ್ರು ನಮ್ಮ ನಾಯಕರು ಎಂದು ಹೇಳಿದಾಗ ನಾಯಕರಾಗುವುದು ಎಂದು ಶಾಮನೂರು ಅಭಿಪ್ರಾಯಪಟ್ಟರು.

ವೀರಶೈವ ಲಿಂಗಾಯತರು ಎಲ್ಲರೂ ಒಂದೇ ಎಂಬ ನಿಲುವು ಅಚಲ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಚಿವ ಮುರುಗೇಶ್ ನಿರಾಣಿ ಸರಿಯಾಗಿಯೇ ಹೇಳಿದ್ದಾರೆ. ಸಾದರು, ಪಂಚಮಸಾಲಿ, ಗಾಣಿಗರು, ಬಣಜಿಗರು ಸೇರಿದಂತೆ ಎಲ್ಲಾ ಪಂಗಡದವರೂ ವೀರಶೈವ ಲಿಂಗಾಯತರೇ. ಇದರಲ್ಲಿ ಎರಡು ಮಾತಿಲ್ಲ‌. ಎಲ್ಲರನ್ನೂ ಮಹಾಸಭಾ ವೀರಶೈವ ಲಿಂಗಾಯತರೆಂದೇ ಪರಿಗಣಿಸುತ್ತದೆ ಎಂದು ಹೇಳಿದರು.

ಯಡಿಯೂರಪ್ಪರ ನಂತರ ಲಿಂಗಾಯತ ನಾಯಕರಾಗಲು ಎಂ. ಬಿ. ಪಾಟೀಲ್ ಹೊರಟಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅವರೂರಲ್ಲಿ ನಿಂತು ಗೆದ್ದು ಬರಲಿ ಎಂದು ಶಾಮನೂರು ಕುಟುಕಿದರು.

ಎಸ್. ಎ. ಜಾಮದಾರ್ ಅವರು ಲಿಂಗಾಯತ ಧರ್ಮ ಬೇಕು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಶಾಮನೂರು, ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಜಾಮದಾರ್ ಹೆಸರು ಹೇಳಬೇಡ. ಸವಾಲು ನಾಣ್ಯ. ಸುಮ್ಮನೆ ಮಾತನಾಡ್ತಾರೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button