ಕೊಡಗು

ವಿರಾಜಪೇಟೆಯಿಂದ ಲಡಾಖ್​ಗೆ ಪಾದಯಾತ್ರೆ

ಮಡಿಕೇರಿ: ದಕ್ಷಿಣ ಕೊಡಗಿನ ವಿರಾಜಪೇಟೆಯ ಕಲ್ಲುಬಾಣೆ ನಿವಾಸಿ ಅಫ್ನಸ್ ಮತ್ತು ಕಡಂಗ ಗ್ರಾಮದ ನಿವಾಸಿ ಅನ್ವರ್ ಕಾಲ್ನಡಿಗೆಯಲ್ಲಿ ಲಡಾಕ್‌ಗೆ ಪ್ರಯಾಣ ಬೆಳೆಸಿದ್ದಾರೆ. ವಿರಾಜಪೇಟೆ ನಗರದ ಬದ್ರೀಯ ಮಸೀದಿಯ ಮುಂಭಾಗ ಸದಸ್ಯರಾದ ಮೊಹಮ್ಮದ್ ರಾಫಿ ಅವರು ಹಸಿರು ನಿಶಾನೆ ತೋರುವ ಮೂಲಕ ಪಾದಯತ್ರೆಗೆ ಚಾಲನೆ ನೀಡಿದರು.

ಕಾಲ್ನಡಿಗೆಯಲ್ಲಿ ಲಡಾಕ್ ತೆರಳಬೇಕು ಎಂಬುದು ಹಂಬಲವಾಗಿತ್ತು. ಪೋಷಕರನ್ನು ಮನವೊಲಿಸಿ ಕೆಲವು ಸ್ನೇಹಿತರು ಮತ್ತು ಉದ್ಯಮಿಗಳು ಅರ್ಥಿಕವಾಗಿ ಸಹಕಾರ ಮಾಡಿದ ಮೇರೆಗೆ ಇಂದು ತೆರಳುತ್ತಿದ್ದೇವೆ ಎಂದು ಅನ್ವರ್ ಹೇಳಿದರು.

ಸಾಧನೆಗಾಗಿ ಈ ಪಾದಯತ್ರೆಯಾಗಿದೆ. ನಮಗೆ ಸಹಾಯ ಮಾಡಿ ಎಂದು ಪರಿಚಿತ ವ್ಯಕ್ತಿಗಳ ಬಳಿ ಹೇಳಿದೆವು. ಅವರು ನಮ್ಮ ಕನಸುಗಳಿಗೆ ಸಹಕಾರದಿಂದ ಲಡಾಖ್​ಗೆ ಪ್ರಯಾಣ ಆರಂಭಿಸಿದ್ದೇವೆ. ಮೂರು ನಾಲ್ಕು ತಿಂಗಳಾಗಬಹುದು ಎಂದು ಅಫ್ನಸ್ ಹೇಳಿದರು.

ಯುವಕರ ಈ ಮಹತ್ತರ ಸಾಧನೆಗಾಗಿ ಅಂತರ್ ರಾಷ್ಟ್ರೀಯ ರಗ್ಬಿ ಆಟಗಾರರಾದ ಮಾದಂಡ ತಿಮ್ಮಯ್ಯ, ಉದ್ಯಮಿ ಸಿ.ಎ. ರಾಸೀಕ್ ಮತ್ತು ಇತರರು ಅರ್ಥಿಕವಾಗಿ ಧನ ಸಹಾಯ ಒದಗಿಸಿದ್ದಾರೆ. ನಗರ ಠಾಣೆಯ ಠಾಣಾಧಿಕಾರಿ ಜಗಧೀಶ್ ಧೂಳಶೆಟ್ಟಿ ಅವರು ವಿಶಿಷ್ಟ ಸಾಧನೆ ಮಾಡಲು ಮುಂದಾದ ಯುವಕರನ್ನು ಗೌರವಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button