ಮಕ್ಕಳಿಗಾಗಿ ಮಾರುಕಟ್ಟೆಗೆ ಬರುತ್ತಿದೆ ಹೋವರ್ ಎಲೆಕ್ಟ್ರಿಕ್ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ಮಾರಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳದ್ದೆ ಕಾರುಬಾರು ಆಗಿದೆ. ಭಾರತದಲ್ಲಿ ತುಂಬಾ ಕಂಪನಿಗಳಿದ್ದು, ಈಗಾಗಲೆ ಸಾಕಷ್ಟು ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಇದೀಗ ಶಾಲಾ- ಕಾಲೇಜು ಮಕ್ಕಳಿಗಾಗಿ ಈ EV ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಇದನ್ನು ಚಲಾಯಿಸಲು ಯಾವುದೇ ರೀತಿಯ ಪರವಾನಗಿ ಅಗತ್ಯವಿಲ್ಲ. ಚೌಕಟ್ಟನ್ನು ಮಾತ್ರ ಬಳಸಿರುವ ಈ ಸ್ಕೂಟರ್ ಯಾವುದೇ ಅಲಂಕಾರಗಳಿಲ್ಲದೆ ಬಂದಿದೆ. ಈ ಸ್ಕೂಟರ್‌ಗೆ ಅಗಲವಾದ ಟೈರ್‌ಗಳನ್ನು ನೀಡಲಾಗಿದ್ದು ಅದು ವಿಭಿನ್ನ ನೋಟವನ್ನು ನೀಡುತ್ತದೆ.
ಹೋವರ್ ಎಲೆಕ್ಟ್ರಿಕ್ ಸ್ಕೂಟರ್ ಪ್ರಾಥಮಿಕವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡಿದೆ ಮತ್ತು 25 ಕಿಮೀ / ವೇಗವನ್ನು ಹೊಂದಿದೆ. ಇದನ್ನು ಚಲಾಯಿಸಲು ಯಾವುದೇ ಪರವಾನಗಿ ಅಗತ್ಯವಿಲ್ಲ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 12-18 ವರ್ಷ ವಯಸ್ಸಿನ ಯುವಕರಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಇದು 25 AH ಪುನಃ ಭರ್ತಿ ಮಾಡಬಹುದಾದ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಬರುತ್ತದೆ. ಇದು 3 ಸೆಕೆಂಡುಗಳಲ್ಲಿ 0-25 ಕಿಮೀ / ಗಂ ವೇಗವನ್ನು ಹೆಚ್ಚಿಸುತ್ತದೆ.
