Breaking NewsLatestರಾಜ್ಯರಾಷ್ಟ್ರೀಯವಿದೇಶಸುದ್ದಿ

ಭಾರತದಿಂದ ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನಗಳು ಸ್ಥಗಿತ: ಡಿಜಿಸಿಎ ಆದೇಶ

ನವದೆಹಲಿ: ಮುಂದಿನ ಆದೇಶದವರೆಗೆ ಭಾರತದಿಂದ ನಿಯಮಿತ ಅಂತರ ರಾಷ್ಟ್ರೀಯ ಪ್ರಯಾಣಿಕರ ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಸೋಮವಾರ ತಿಳಿಸಿದೆ. ಈ ನಿರ್ಬಂಧವು ಡಿಜಿಸಿಎ ಯಿಂದ ನಿರ್ದಿಷ್ಠವಾಗಿ ಅನುಮೋದಿಸಲಾದ ಅಂತಾರಾಷ್ಟ್ರೀಯ ಎಲ್ಲಾ ಸರಕು ಕಾರ್ಯಾಚರಣೆಗಳು ಮತ್ತು ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಕೊರೋನಾ ವೈರಸ್ ಸಾಂಕ್ರಮಿಕ ರೋಗದಿಂದಾಗಿ ಕಳೆದ ಮಾ.23.2020ರಿಂದ ಭಾರತದಲ್ಲಿ ಅಂತರ ರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಕಳೆದ ಜು.2020ರಿಂದ ಭಾರತ ಮತ್ತು ಸುಮಾರು 40 ದೇಶಗಳ ನಡುವೆ ವಿಶೇಷ ಪ್ರಯಾಣಿಕ ವಿಮಾನಗಳು ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.  

Spread the love

Related Articles

Leave a Reply

Your email address will not be published. Required fields are marked *

Back to top button