Breaking NewsLatestಮೆಟ್ರೋ

ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ನಿಧನ

ಬೆಂಗಳೂರು: ವಿಜ್ಞಾನ ಬರಹಗಾರ ಹೆಚ್​ಎಎಲ್ ಹಿರಿಯ ನಿವೃತ್ತ ಇಂಜಿನಿಯರ್​ ಸುಧೀಂದ್ರ ಹಾಲ್ದೊಡ್ಡೇರಿ ಶುಕ್ರವಾರ ನಿಧನರಾಗಿದ್ದಾರೆ.

ಅವರು ತೀವ್ರ ಹೃದಯಾಘಾತದ ಬಳಿಕ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಅವರ ಮೆದುಳು ನಿಷ್ಕ್ರಿಯ ಹಂತಕ್ಕೆ ತಲುಪಿದ್ದ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

ಕನ್ನಡದಲ್ಲಿ ವಿಜ್ಞಾನ ಬರಹಗಳನ್ನು ಬರೆಯುವ ಕೆಲವೇ ಕೆಲವರಲ್ಲಿ ಹಾಲ್ದೊಡ್ಡೇರಿ ಅವರೂ ಒಬ್ಬರಾಗಿದ್ದರು. ಹಾಲ್ದೊಡ್ಡೇರಿ ಅವರ ದೇಹದಾನಕ್ಕೆ ಕುಟುಂಬಸ್ಥರು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಅವರ ಪುತ್ರಿ ಮೇಘನಾ ಕೂಡ ಕನ್ನಡ ಬರಹಗಾರ್ತಿಯಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button