Latestಕೋಲಾರಜಿಲ್ಲಾ ಸುದ್ದಿ
ಭೀಕರ ರಸ್ತೆ ಅಪಘಾತ: ಇಬ್ಬರು ಸಾವು

ಕೋಲಾರ: ಬೈಕ್ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಕೋಲಾರ ನಡೆದಿದೆ.
ವೆಂಕಟರಾಜನಹಳ್ಳಿಯ ಗಂಗಾಧರ್ (26), ಮುರಳಿ (25) ಮೃತ ದುರ್ದೈವಿ. ಕೋಲಾರದ ಮಾಲೂರು ತಾಲೂಕಿನ ಬೈರಸಂದ್ರ ಗೇಟ್ ಬಳಿ ನಡೆದಿದೆ. ಮದುವೆ ಮುಗಿಸಿಕೊಂಡು ಬುಲೆಟ್ ನಿಂದ ಊರಿಗೆ ವಾಪಸ್ಸಾಗುತ್ತಿದ್ದ ಇಬ್ಬರು ಸವಾರರ ಬೈಕ್ ಗೆ ಹಿಂಬದಿಯಿಂದ ಅಪರಿಚಿತ ವಾಹನ ಒಂದು ಗುದ್ದಿದೆ.
ಗುದ್ದಿರುವ ರಭಸಕ್ಕೆ ಬುಲೆಟ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬುಲೆಟ್ ಬೈಕ್ ಅಪಘಾತದ ರಭಸಕ್ಕೆ ಜಖಂ ಆಗಿದೆ.



