ಲವ್ ಪದಕ್ಕೂ ನನಗೂ ಆಗಿ ಬರಲ್ಲ ಎಂದ ಡಿಂಪಲ್ ಕ್ವೀನ್ ರಚಿತಾ ರಾಮ್

ರಚಿತಾ ರಾಮ್ ಸ್ಯಾಂಡಲ್ವುಡ್ನ ನಂಬರ್ ವನ್ ನಟಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಜೋಡಿಯಾಗಿ ನಟಿಸಿ ಸಕ್ಸಸ್ ಆದ ಡಿಂಪಲ್ ಕ್ವೀನ್ ಬಳಿಕ ಮುಟ್ಟಿದೆಲ್ಲಾ ಚಿನ್ನವಾಗೋಕೆ ಶುರುವಾಯ್ತು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ರಚಿತಾ ರಾಮ್ ಇತ್ತಿಚೆಗೆ ಹೆಚ್ಚಾಗಿ ಬೋಲ್ಡ್ ಪಾತ್ರಗಳಿಗೆ ಬಣ್ಣ ಹಚ್ಚಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಇಷ್ಟು ದಿನಗಳ ಕಾಲ ಹೋಮ್ಲಿ ಲುಕ್ನಲ್ಲಿ ಕಾಣಿಸಿಕೊಳ್ತಿದ್ದ ನಟಿ ರಚಿತಾ ರಾಮ್ ‘ಐ ಲವ್ ಯೂ’ ಚಿತ್ರದ ಬಳಿಕ ಬೋಲ್ಡ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣೀಸಿಕೊಳ್ತಿದ್ದಾರೆ. ‘ಐ ಲವ್ ಯೂ’ ಬಳಿಕ ‘ಲವ್ ಯೂ ರಚ್ಚು’, ಇದೀಗ ರಿಲೀಸ್ಗೆ ರೆಡಿಯಾಗಿರೋ ‘ಏಕ್ ಲವ್ ಯಾ’ ಸಿನಿಮಾದಲ್ಲೂ ರಚಿತಾ ರಾಮ್ ಸಖತ್ ಬೋಲ್ಡ್ ಅಗಿ ಕಾಣಿಸಿಕೊಂಡು ಸಖತ್ ಸುದ್ದಿಯಾಗಿದ್ದಾರೆ.
ಏಕ್ ಲವ್ ಯಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಟ್ರೈಲರ್ನಲ್ಲಿ ರಚಿತಾ ರಾಮ್ ಸ್ಮೋಕಿಂಗ್ ಹಾಗೂ ಡ್ರಿಂಕಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ರ ಜೊತೆಗೆ ಚಿತ್ರದ ನಟ ರಾಣಾ ಜೊತೆ ಕಿಸ್ಸಿಂಗ್ ದೃಶ್ಯಗಳಲ್ಲೂ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಚಿತಾ ರಾಮ್ ‘ಪುಷ್ಪಕ ವಿಮಾನ’, ‘ಆಯುಷ್ಮಾನ್ ಭವ’ ಹಾಗೂ ‘100’ ನಂತಹ ಸಿನಿಮಾಗಳಲ್ಲೂ ನಟಿಸಿದ್ದೇನೆ. ನನ್ನ ವೃತ್ತಿ ಜೀವನ ಸ್ಟಿರಿಯೋ ಟೈಪ್ ಆಗಲು ಬಿಡುವುದಿಲ್ಲ. ನನ್ನ ಪ್ರತಿಭೆಯನ್ನು ಒರೆಗೆ ಹಚ್ಚುವಂತ ಸಿನಿಮಾಗಳಲ್ಲಿ ನಟಿಸಲು ನಾನು ಬಯಸುತ್ತಿದ್ದೇನೆ. ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳನ್ನ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಆದರೆ ಇನ್ನು ಮುಂದೆ ವಿಷಯಾಧಾರಿತ ಸಿನಿಮಾಗಳ ಬಗ್ಗೆ ಗಮನ ಹರಿಸುತ್ತೇನೆ ಎಂದಿದ್ದಾರೆ.
ರಚಿತಾ ರಾಮ್ ನಟನೆಯ ಸಾಕಷ್ಟು ಸಿನಿಮಾಗಳ ಟೈಟಲ್ನಲ್ಲಿ ಲವ್ ಪದವನ್ನ ಬಳಸಲಾಗಿರುತ್ತೆ. ಈ ಬಗ್ಗೆ ಮಾತನಾಡಿದ ರಚಿತ ರಾಮ್ ಇನ್ನು ಮುಂದೆ ಸಿನಿಮಾಗಳಿಗೆ ಸಹಿ ಮಾಡುವಾಗ ಚಿತ್ರದ ಟೈಟಲ್ನಲ್ಲಿ ಲವ್ ಎಂಬ ಪದ ಇಲ್ಲದ ಕಥೆಗಳನ್ನ ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಲವ್ ನನಗೆ ವರ್ಕೌಟ್ ಆಗುವುದಿಲ್ಲ ಎಂದಿದ್ದಾರೆ.
ನಾನು ಏನೇ ಮಾಡಿದರು ಸಿನಿಮಾಗಾಗಿ ಮಾತ್ರವೇ ಮಾಡುತ್ತೇನೆ. ಪ್ರಚಾರಕ್ಕಾಗಿ ಯಾವುದನ್ನೂ ಮಾಡುತ್ತಿಲ್ಲ. ಏಕ್ ಲವ್ ಯಾ ಸಿನಿಮಾದಲ್ಲಿ ಸ್ಮೋಕಿಂಗ್, ಡ್ರಿಕಿಂಗ್ ಹಾಗೂ ರೊಮ್ಯಾಂಟಿಕ್ ಸೀನ್ಗಳಲ್ಲಿ ಕಾಣಿಸಿಕೊಂಡಿದ್ದು ಪಾತ್ರಕ್ಕೆ ಅದು ಅವಶ್ಯಕತೆ ಇತ್ತು ಎಂದಿದ್ದಾರೆ.



