Latestಮನರಂಜನೆಸಿನಿಮಾಸೆಲೆಬ್ರಿಟಿ

ನಿರ್ದೇಶಕ ಪ್ರಶಾಂತ್ ನೀಲ್ ಬಗ್ಗೆ ಬೇಸರ ಹೊರ ಹಾಕಿದ ನಟಿ ರವೀನಾ ಟಂಡನ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ದೇಶ ವಿದೇಶಗಳಲ್ಲೂ ಸುದ್ದಿಯಾಗಿದ್ದು ಗೊತ್ತೆ ಇದೆ. ಇದೀಗ ಕೆಜಿಎಫ್ 2 ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾದು ಕೂತಿದ್ದೆ. ಎಲ್ಲವೂ ಸರಿ ಇದ್ದಿದ್ದರೆ ಈಗಾಗ್ಲೆ ಚಿತ್ರ ತೆರೆಗೆ ಬರಬೇಕಿತ್ತು. ಆದ್ರೆ ಕೊರೊನಾ ಕಾರಣದಿಂದ ಚಿತ್ರದ ರಿಲೀಸ್ ಡೇಟ್ ಮುಂದೂಡಿದೆ ಚಿತ್ರತಂಡ. ಇದೀಗ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ತಾರೆ ರವೀನಾ ಟಂಡನ್ ಚಿತ್ರದ ನಿರ್ದೇಶಕರ ಪ್ರಶಾಂತ್ ನೀಲ್​ರಿಂದ ನಿರಾಸೆಗೊಂಡಿದ್ದಾರೆ.

ಬಾಲಿವುಡ್​ನ ಖ್ಯಾತ ನಟ ಸಂಜಯ್ ದತ್ ಹಾಗೂ ನಟಿ ರವೀನಾ ಟಂಡನ್ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಜೋಡಿಯನ್ನ ತೆರೆ ಮೇಲೆ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ರು. ಆದ್ರೆ 2003ರಲ್ಲಿ ತೆರೆಕಂಡ ಲಾಕ್ ಕಾರ್ಗಿಲ್ ಚಿತ್ರದ ಬಳಿಕ ಈ ಜೋಡಿಯನ್ನ ಮತ್ತೆ ಒಂದು ಮಾಡಿದ್ದು ಯಶ್ ನಟನೆಯ ಕೆಜಿಎಫ್ ಸಿನಿಮಾ.

ಬರೋಬ್ಬರಿ 15 ವರ್ಷಗಳ ಬಳಿಕ ಈ ಜೋಡಿಯನ್ನ ಕೆಜಿಎಫ್ ಚಿತ್ರದ ಮೂಲಕ ಮತ್ತೆ ಒಂದು ಮಾಡಿದ್ದು ನಿರ್ದೇಶಕ ಪ್ರಶಾಂತ್ ನೀಲ್. ಇದೀಗ ಕೆಜಿಎಫ್ 2 ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರೋಕೆ ಸಿದ್ದವಾಗಿದೆ. ಆದ್ರೆ ಕೆಜಿಎಪ್ 2 ಚಿತ್ರದಲ್ಲಿ ಸಂಜಯ್ ದತ್ ಹಾಗೂ ರವೀನಾ ಟಂಡನ್ ಒಟ್ಟಿಗೆ ಒಂದೇ ಒಂದು ಸೀನ್​ನಲ್ಲೂ ಕಾಣಿಸಿಕೊಂಡಿಲ್ಲವಂತೆ. ಇದು ನಟಿ ರವೀನಾ ಟಂಡನ್​ಗೆ ಸಾಕಷ್ಟು ಬೇಸರ ಮೂಡಿಸಿದೆ.

ನಾನು, ಸಂಜಯ್ ದತ್ ಒಟ್ಟಾಗಿ ಇರುವ ದೃಶ್ಯ ಮಾಡಿ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಹೇಳಿದರು ಯಾವುದೇ ಪ್ರಯೋಜನವಾಗಿಲ್ಲ. ನಾವು ಈ ಹಿಂದೆ ಇದ್ದಂತೆ ಸೆಟ್​ನಲ್ಲಿ ಎಂಜಾಯ್ ಮಾಡುತ್ತೇವೆ ಎಂದುಕೊಂಡಿದ್ದೆ. ಆದರೆ ಈ ಚಿತ್ರದಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳಲಾಗಲಿಲ್ಲ. ನಮ್ಮ ಶೂಟಿಂಗ್ ಶೆಡ್ಯೂಲ್ ಬೇರೆ ಬೇರೆ ಇತ್ತು ಎಂದು ರವೀನಾ ಟಂಡನ್ ಬೇಸರ ವ್ಯಕ್ತಪಡಿಸಿದ್ದಾರೆ.

ರವೀನಾ ಟಂಡನ್ 21 ವರ್ಷಗಳ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ `ಉಪೇಂದ್ರ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಬಳಿಕ ಸ್ಯಾಂಡಲ್​ವುಡ್​ಗೆ ಕಂಬ್ಯಾಕ್ ಮಾಡಿದ್ದೆ ಯಶ್ ನಟನೆಯ ಕೆಜಿಫ್ ಚಿತ್ರದ ಮೂಲಕ. ಅದರಲ್ಲೂ ಕೆಲ ವರ್ಷಗಳಿಂದ ನಟನೆಯಿಂದ ದೂರವಿದ್ದ ರವೀನಾಗೆ ಈ ಚಿತ್ರ ಮತ್ತೊಂದು ಬ್ರೇಕ್ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ರವೀನಾ ಟಂಡನ್ ಚಿತ್ರದಲ್ಲಿ ರಮೀಕಾ ಸೇನ್ ಎಂಬ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿವಂಗತ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರಿಂದ ಪ್ರೇರಣೆ ಪಡೆದ ರಮೀಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಕಾಣಿಸಿಕೊಳ್ಳಲಿದ್ದು ಈಗಾಗ್ಲೆ ಬಿಡುಗಡೆಯಾಗಿರೋ ಪೋಸ್ಟರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button