ವಿಜಯ್ ದಳಪತಿಗೆ ಜೋಡಿಯಾದ ರಶ್ಮಿಕಾ ಮಂದಣ್ಣ?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಫುಲ್ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಜೊತೆಗೆ ಬಾಲಿವುಡ್ನಲ್ಲಿ ಬೇಡಿಕೆ ಕ್ರಿಯೇಟ್ ಮಾಡಿರೋ ರಶ್ಮಿಕಾ ಕಾಲ್ಶೀಟ್ ಪಡೆಯೋಕೆ ಸ್ಟಾರ್ ನಿರ್ಮಾಪಕರು ಕಾದು ಕೂತಿದ್ದಾರೆ. ರಶ್ಮಿಕಾ ಹಲವು ಸ್ಕ್ರಿಪ್ಟ್ಗಳನ್ನ ಕೇಳುತ್ತಿದ್ದು ಅಳೆದು ತೂಗಿ ಸಿನಿಮಾ ಆಯ್ಕೆ ಮಾಡಿಕೊಳ್ತಿದ್ದಾರೆ. ಈ ಮಧ್ಯೆ ಕಾಲಿವುಡ್ ಅಂಗಳದಿಂದ ಸುದ್ದಿಯೊಂದು ಹೊರ ಬಿದಿದ್ದು ವಿಜಯ್ ದಳಪತಿ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿ ಅನ್ನೋ ಮಾತು ಕೇಳಿ ಬರ್ತಿದೆ.
ನಟ ವಿಜಯ್ ಸದ್ಯ ಬೀಸ್ಟ್ ಸಿನಿಮಾದ ಕೊನೆಯ ಹಂತದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ದಿಲೀಪ್ ನಿರ್ದೇಶನದ ಬೀಸ್ಟ್ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರ್ತಿದ್ದು ಇದೀಗ ವಿಜಯ್ ನಟನೆಯ 66ನೇ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಏಪ್ರಿಲ್ 2ರಂದು ಸಿನಿಮಾ ಸೆಟ್ಟೇರಲಿದೆ.
ವಿಜಯ್ರ 66ನೇ ಚಿತ್ರವನ್ನ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿದ್ದು ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡ್ತಿದ್ದಾರೆ. ಆರಂಭದಲ್ಲಿ ಪೂಜಾ ಹೆಗ್ಡೆ ಹಾಗೂ ಕಿಯಾರಾ ಅಡ್ವಾಣಿ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆದಿತ್ತು, ಆದರೆ ಕೊನೆಯ ಘಳಿಗೆಯಲ್ಲಿ ರಶ್ಮಿಕಾ ಅವರನ್ನು ಚಿತ್ರತಂಡಕ್ಕೆ ಸೆಲೆಕ್ಟ್ ಮಾಡಲಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ. ಆದರೆ ಈ ಕುರಿತಾಗಿ ಚಿತ್ರತಂಡ ಮಾತ್ರ ಯಾವುದನ್ನೂ ಬಾಯಿ ಬಿಟ್ಟಿಲ್ಲ.
ಹಿಂದಿಯ ‘ಮಿಷನ್ ಮಜ್ನು’ ಹಾಗೂ ‘ಗುಡ್ ಬೈ’ ಸಿನಿಮಾ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ‘ಪುಷ್ಪ 2’ ಚಿತ್ರದ ಶೂಟಿಂಗ್ನಲ್ಲೂ ಅವರು ಶೀಘ್ರವೇ ಪಾಲ್ಗೊಳ್ಳಲಿದ್ದು, ಇತ್ತೀಚೆಗೆ ರಿಲೀಸ್ ಆದ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿಲ್ಲ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
