ರಿಲೀಸ್ ಆಯ್ತು ಜೇಮ್ಸ್ ಚಿತ್ರದ ಹಾಡು: ಸಲಾಂ ಪುನೀತ್ ಎಂದ ಅಭಿಮಾನಿಗಳು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಜೇಮ್ಸ್ ಸಿನಿಮಾ ಇನ್ನೆನ್ನೂ ಕೆಲವೇ ಕೆಲವು ದಿನಗಳಲ್ಲಿ ತೆರೆಗೆ ಬರಲಿದೆ. ಚಿತ್ರ ನೋಡೋಕೆ ಅಭೀಮಾನಿಗಳು ಕಾದು ಕೂತಿದ್ದು ಈಗಾಗ್ಲೆ ಅದಕ್ಕಾಗಿ ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಇದೀಗ ಚಿತ್ರತಂಡ ಅಭಿಮಾನಿಗಳಿಗಾಗಿ ಜೇಮ್ಸ್ ಸಿನಿಮಾದ ಹಾಡೊಂದನ್ನ ಬಿಡುಗಡೆ ಮಾಡಿದೆ.
ಈ ಹಿಂದೆ ರಿಲೀಸ್ ಆಗಿದ್ದ ಜೇಮ್ಸ್ ಸಿನಿಮಾದ ಟ್ರೇಡ್ ಮಾರ್ಕ್ ಲಿರಿಕಲ್ ವಿಡಿಯೋ ಸಖತ್ ಸೌಂಡ್ ಮಾಡಿತ್ತು. ಇದೀಗ ಸಲಾಂ ಸೋಲ್ಜರ್ ಅನ್ನೋ ಹಾಡಿನ್ನ ಚಿತ್ರತಂಡ ಬಿಡುಗಡೆ ಮಾಡಿದೆ. ಪಿಆರ್ ಕೆ ಆಡಿಯೋ ಮೂಲಕ ಬಿಡುಗಡೆ ಆಗಿರೋ ಹಾಡಿನಲ್ಲಿ ಪುನೀತ್ ಸೋಲ್ಜರ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಯುವ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ನೀಡಿದ್ದು ಚಿತ್ರಕ್ಕೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಜೇಮ್ಸ್ ಸಿನಿಮಾದ ಮೇಲೆ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ‘ಜೇಮ್ಸ್’ ಸಿನಿಮಾದ ಮುಂಗಡ ಬುಕಿಂಗ್ ಓಪನ್ ಮಾಡಲಾಗಿದೆ. ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ವಿಶ್ವಾದ್ಯಂತ 4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜೇಮ್ಸ್ ಬಿಡುಗಡೆ ಆಗುತ್ತಿದ್ದು ಮೊದಲ ದಿನವೇ ಚಿತ್ರ ಕಣ್ಮುಂಬಿಕೊಳ್ಳಲು ಅಭಿಮಾನಿಗಳು ರೆಡಿಯಾಗಿದ್ದಾರೆ.
