ಬಾಲಿವುಡ್ ನಲ್ಲಿ ಮತ್ತೊಂದು ಜೋಡಿಯ ಪ್ರೇಮ ಪುರಾಣ; ಯಾರು ಗೊತ್ತಾ?

ಬಾಲಿವುಡ್ ಅಂಗಳದಲ್ಲಿ ಆಗಾಗ ನಾಯಕ-ನಾಯಕಿಯರ ಪ್ರೇಮ ಪುರಾಣದ ಸುದ್ದಿ ಕೇಳಿಬರುತ್ತದೆ. ಇದೀಗ ಮತ್ತೊಂದು ಜೋಡಿಯ ಪ್ರೇಮ ಕಹಾನಿಯ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅವರು ಬೇರೆ ಯಾರು ಅಲ್ಲ ಎಲ್ಲರ ಹೃದಯ ಕದ್ದಿದ್ದ ನಟ ಹೃತಿಕ್ ರೋಷನ್.
ಹೌದು ಎಂಟು ವರ್ಷಗಳ ಹಿಂದೆ ಸುಸೇನ್ ಖಾನ್ ಅವರಿಂದ ಡಿವೋರ್ಸ್ ಪಡೆದಿರುವ ಹೃತಿಕ್ ರೋಷನ್, ಈಗ ಮತ್ತೊಂದು ಹುಡುಗಿಯ ಜೊತೆ ಪ್ರೇಮದ ನಂಟಿನಲ್ಲಿ ಸಿಲುಕಿಕೊಂಡಿದ್ದಾರೆ. ಆ ಹುಡುಗಿಯ ಜೊತೆಗೆ ಹೃತಿಕ್ ರೋಷನ್ ಡೇಟಿಂಗ್ ಕೂಡ ಮಾಡುತ್ತಿದ್ದಾರೆ ಎಂದು ಕೇಳಿಬಂದಿದೆ. ಅವರ ಮಾಜಿ ಪತ್ನಿ ಸುಸೇನ್ ಖಾನ್ ಆತ್ಮೀಯ ಗೆಳತಿ ಸಬಾ ಆಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರು ಕೆಲ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅಭಿಮಾನಿ ಬಳಗದವರಿಗೆ ಅನುಮಾನ ಮೂಡಿದೆ.
ಇತ್ತೀಚೆಗೆ ನಟ ಫರ್ಹಾನ್ ಮದುವೆಗೆ ಹೃತಿಕ್ ರೋಷನ್ ಸಬಾರನ್ನು ಕರೆದುಕೊಂಡು ಹೋಗಿದ್ದರು.ಕೆಲ ತಿಂಗಳ ಹಿಂದೆ ಗೋವಾದಲ್ಲೂ ಈ ಜೋಡಿ ಕಾಣಿಸಿಕೊಂಡಿತ್ತು. ಹೀಗೆ ಅವರ ನಡುವಿನ ಪ್ರೇಮ ಕಹಾನಿ ಕುರಿತು ಹಲವು ಅನುಮಾನ ಕಾಡುತ್ತಿದೆ. ಈ ಜೋಡಿಯಬಗ್ಗೆ ಈಗ ಮತ್ತೆ ಹೊಸ ಸುದ್ದಿಯೊಂದು ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಇಬ್ಬರೂ ಸರಳವಾಗಿ ಹಸಮಣೆ ಏರಲಿದ್ದಾರಂತೆ. ಒಟ್ಟಾರೆಯಾಗಿ ಈ ಎಲ್ಲ ಗೊಂದಲಕ್ಕೆ ಅಂತ್ಯವಾಡಬೇಕಿದೆ.
