ಜೇಮ್ಸ್ ಚಿತ್ರದ 1003 ಟಿಕೇಟ್ ಖರೀದಿಸಿ ಅಭಿಮಾನ ಮೆರೆದ ಪುನೀತ್ ರಾಜ್ ಕುಮಾರ್ ಅಭಿಮಾನಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ ಇಂದು ವಿಶ್ವದಾದ್ಯಂತ ಸಾಕಷ್ಟು ಅದ್ದೂರಿಯಾಗಿ ತೆರೆಗೆ ಬಂದಿದೆ. ಈ ವೇಳೆ ಅಪ್ಪು ಅವರ ಅಪ್ಪಟ ಅಭಿಮಾನಿಯೊಬ್ಬರು ಅಪ್ಪು ಮೇಲಿನ ಪ್ರೀತಿಯಿಂದ ಮೊದಲ ಶೋನ 1003 ಟಿಕೇಟ್ ಗಳನ್ನ ಖರೀದಿಸಿ ಸಿನಿಮಾ ವೀಕ್ಷಿಸಿದ್ದಾರೆ.
ನೆಲಮಂಗಲದ ನಿವಾಸಿ ಅಪ್ಪು ಅಭಿಮಾನಿ ಗೋವಿಂದ ರಾಜ್ 1003 ಟಿಕೇಟ್ ಗಳನ್ನ ಖರೀದಿಸಿ ಸಿನಿಮಾ ವೀಕ್ಷಿಸಿದ್ದಾರೆ. ಜೇಮ್ಸ್ ಚಿತ್ರದ ವಿಭಿನ್ನ ಟಿಕೇಟ್ ಮುದ್ರಿಸಿದ್ದು ಈ ಟಿಕೇಟ್ ಇದೀಗ ಸಾಕಷ್ಟು ಸದ್ದು ಮಾಡ್ತಿದ್ದೆ.
ಟಿಕೇಟ್ ನಲ್ಲಿ ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ಗೋವಿಂದ ರಾಜ್ ಅವರ ಫೋಟೋ ಇರುವ ಟಿಕೇಟ್ ಮುದ್ರಿಸಲಾಗಿದೆ. ಅಲ್ಲದೆ ಮಹಾಭಾರತದಲ್ಲಿ ಪಾಂಡವರ ಸಹೋದರರಂತೆ, ಕಲಿಯುಗದಲ್ಲಿ ಒಡಹುಟ್ಟಿದವರಂತೆ ಇದ್ದರೆ ಇರಬೇಕಯ್ಯ ಶಿವಣ್ಣ, ರಾಘಣ್ಣ, ಪುನೀತ್ ರಾಜ್ ಕುಮಾರ್ ಸಹೋದರರಂತೆ ಎಂದು ಬರೆಸಿದ್ದಾರೆ.
ಬೆಂಗಳೂರಿನ ಹೊರವಲಯದ ನೆಲಮಂಗಲದಲ್ಲಿರುವ ರೂಪ ಚಿತ್ರಮಂದಿರದಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಗೋವಿಂದರಾಜ್ ಸಿನಿಮಾ ವೀಕ್ಷಿಸಿದ್ದಾರೆ. ರೂಪ ಚಿತ್ರಮಂದಿರವನ್ನ ತಳಿರು ತೋರಣಗಳಿಂದ ಅಲಂಕರಿಸಿ ಜೇಮ್ಸ್ ಚಿತ್ರವನ್ನ ಭರಮಾಡಿಕೊಂಡಿದ್ದಾರೆ.
