Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿ

ದುಲ್ಕರ್ ಸಿನಿಮಾಗಳಿಗೆ ಥಿಯೇಟರ್ ಕೊಡಲ್ಲ: ವಿತರಕ ಒಕ್ಕೂಟ ಬೆದರಿಕೆ

ಮಲಯಾಳಂನ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ನಟನೆಯ ಮುಂದಿನ ಎಲ್ಲಾ ಸಿನಿಮಾಗಳಿಗೆ ನಿರ್ಭಂದದ ಆತಂಕ ಎದುರಾಗಿದೆ. ದುಲ್ಕರ್ ಸಲ್ಮಾನ್ ನಟನೆಯ ಬಹು ನಿರೀಕ್ಷಿತ ಸೆಲ್ಯೂಟ್ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಆದರೆ ಈ ಸಿನಿಮಾದ ನಡುವಿನ ಒಪ್ಪಂದವೊಂದು ದುಲ್ಕರ್ ಸಲ್ಮಾನ್ ಗೆ ತಲೆ ಬಿಸಿ ತಂದಿದೆ.

ಸೆಲ್ಯೂಟ್ ಸಿನಿಮಾವನ್ನ ನೇರವಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಈ ಹಿಂದೆ ಚಿತ್ರತಂಡ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದೀಗ ಚಿತ್ರವನ್ನ ನೇರವಾಗಿ ಓಟಿಟಿಯಲ್ಲಿ ಬಿಡಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಇದರಿಂದ ಕೇರಳ ಚಿತ್ರ ವಿತರಕರ ಒಕ್ಕೂಟ ಸೆಲ್ಯೂಟ್ ಸಿನಿಮಾದ ಮೇಲೆ ಗರಂ ಆಗಿದೆ.

ಸೆಲ್ಯೂಟ್ ಸಿನಿಮಾ ನಮ್ಮ ಜೊತೆಗಿನ ಒಪ್ಪಂದದಂತೆ ಚಿತ್ರವನ್ನ ಥಿಯೇಟರ್ ನಲ್ಲಿಯೇ ಬಿಡುಗಡೆ ಮಾಡಬೇಕು. ಒಂದು ವೇಳೆ ಚಿತ್ರವನ್ನ ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ ದುಲ್ಕರ್ ಸಲ್ಮಾನ್ ಹಾಗೂ ನಿರ್ಮಾಣ ಸಂಸ್ಥೆಯು ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಒಕ್ಕೂಟದ ಪ್ರತಿನಿಧಿ ಕೆ.ವಿಜಯ್ ಕುಮಾರ್ ಸಲ್ಯೂಟ್ ಸಿನಿಮಾವನ್ನ ಥಿಯೇಟರ್ ನಲ್ಲಿ ರಿಲೀಸ್ ಮಾಡುವುದಾಗಿ ಬರೆದು ಸಹಿ ಮಾಡಿಕೊಟ್ಟ ಒಪ್ಪಂದದ ಪತ್ರ ನಮ್ಮ ಬಳಿ ಇದೆ. ಆದರೆ ಈಗ ಅದಕ್ಕೆ ಅವರು ಗೌರವ ಕೊಡುತ್ತಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ನಿಷೇಧದ ಮಾರ್ಗವನ್ನು ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಆದ್ರೆ ಚಿತ್ರತಂಡ ಮಾತ್ರ ಸೆಲ್ಯೂಟ್ ಸಿನಿಮಾಗೆ ಸಾಕಷ್ಟು ಬಂಡವಾಳ ಹೂಡಿದ್ದೇವೆ. ಇಂದಿಗೂ ಕೋವಿಡ್ ನಿಂದಾಗಿ ಥಿಯೇಟರ್ ನಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಇದೇ ಕಾರಣಕ್ಕೆ ಚಿತ್ರವನ್ನ ಓಟಿಟಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದೇವೆ ಎಂದಿದ್ದಾರೆ. ಒಟ್ನಲ್ಲಿ ವಿತರಕರ ಹಾಗೂ ಚಿತ್ರತಂಡದ ಮಧ್ಯದ ಕಿತ್ತಾಟದಿಂದ ಸೆಲ್ಯೂಟ್ ಸಿನಿಮಾ ಎಲ್ಲಿ ತೆರೆಗೆ ಬರಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button