ಅಭಿಮಾನಿ ವರ್ತನೆಯಿಂದ ಕಾರಿನಿಂದ ಕಾಲು ಜಾರಿ ಬಿದ್ದ ನಟ ಪವನ್ ಕಲ್ಯಾಣ್

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾರಂಗದಲ್ಲಿ ಮಾತ್ರವಲ್ಲದ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರು ಸಿನಿಮಾದಿಂದಲೇ ಸಿಕ್ಕಾಪಟ್ಟೆ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಈಗಾಗಲೆ ಅವರು ಸದಾ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜನರ ಸಮಸ್ಯೆ ಕುರಿತು ಆಗಾಗ ಧ್ವನಿ ಎತ್ತುತ್ತಲೇ ಇರುತ್ತಾರೆ. ಹೀಗಾಗಿ ಅವರು ನಿರಂತರವಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುತ್ತಾರೆ.
ಇನ್ನು ಆಂಧ್ರಪ್ರದೇಶದ ನರಸಪುರಂ ಬಳಿ ಮೀನುಗಾರರ ಪರವಾಗಿ ಪವನ್ ಹೋರಾಟಕ್ಕೆ ಇಳಿದಿದ್ದು, ರೋಡ್ ಶೋದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ಅವರನ್ನು ಭೇಟಿ ಮಾಡಲು ಕಾರು ಮೇಲೆ ಹತ್ತಿ ಅಪ್ಪಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಆ ಅಭಿಮಾನಿಯ ವರ್ತನೆಯಿಂದ ಕಾರು ಮೇಲಿನಿಂದ ಪವನ್ ಜಾರಿ ಬಿದ್ದಿದ್ದಾರೆ.
ಅಂದಹಾಗೆ ಪವನ್ ಕಲ್ಯಾಣ್ ನೆಲಕ್ಕೆ ಬಿಳುತ್ತಿದ್ದಂತೆ ಎಚ್ಚೆತ್ತ ಅಭಿಮಾನಿಗಳು ನಟನನ್ನು ಮೇಲಕ್ಕೆತ್ತಿದ್ದಾರೆ. ಘಟನೆಯಲ್ಲಿ ಪವನ್ ಕಲ್ಯಾಣ್ ಅವರಿಗೆ ಯಾವುದೇ ಪೆಟ್ಟಾಗಿಲ್ಲ ಎಂದು ತಿಳಿದುಬಂದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



