Breaking NewsLatestಜಿಲ್ಲಾ ಸುದ್ದಿರಾಜ್ಯರಾಮನಗರಸುದ್ದಿ
ಉಕ್ರೇನ್ ನಿಂದ ಬುಡಾಪಾಸ್ಟ್ ಗೆ ತಲುಪಿದ ನಿವೇದಿತಾ

ಚನ್ನಪಟ್ಟಣ: ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿನೂತಾ ಚಂದ್ರಶೇಖರ ದಂಪತಿಯ ಎರಡನೇ ಪುತ್ರಿ ನಿವೇದಿತಾ ಅವರು, ಉಕ್ರೇನ್ ಗಡಿ ದಾಟಿ ಹಂಗೇರಿಯಿಂದ ಬುಡಾಪಾಸ್ಟ್ ಗೆ ತಲುಪಿದ್ದಾರೆ. ಯುದ್ದ ಪೀಡಿತ ದೇಶದ ಉಕ್ರೇನ್ ನ ಜಾಪ್ರೋವಿಜಿಯಾ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಮೂರನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದರು.ಉಕ್ರೆನ್ ಗಡಿಯಿಂದ ರೈಲಿನ ಮೂಲಕ ಹಂಗೇರಿಗೆ ತಲುಪಿ ಮೂರು ದಿನಗಳಾಗಿತ್ತು. ಈಗ ಹೆಂಗೇರಿಯಿಂದ ಬುಡಾಪಾಸ್ಟ್ ಗೆ ತಲುಪಿದ್ದಾರೆ. 3 ಜನ ಕನ್ನಡಿಗರು ಸೇರಿ ಒಟ್ಟು 300 ವಿದ್ಯಾರ್ಥಿಗಳು ಇದ್ದಾರೆ.ಬುಡಾಪಾಸ್ಟ್ ನಿಂದ ವಿಮಾನ ನಿಲ್ದಾಣದಲ್ಲಿ ಅಗತ್ಯವಾದ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ತಲುಪಿರುವ ಇವರೆಲ್ಲರೂ ಸುರಕ್ಷಿತವಾಗಿದ್ದು ಯಾವುದೇ ಆತಂಕ ಇಲ್ಲ ಎಂದು ನಿವೇದಿತಾ ತಂದೆ ಚಂದ್ರಶೇಖರ್ ಅವರು ತಿಳಿಸಿದರು. ಬೂಡಾಪಾಸ್ಟ್ ವಿಮಾನ ನಿಲ್ದಾಣದಿಂದ ದೆಹಲಿ, ಮುಂಬೈ ಅಥವಾ ಕರ್ನಾಟಕ
ಅಂತರಾಷ್ಟ್ರೀಯ ನಿಲ್ದಾಣ ದ ಮೂಲಕ ತಾಯ್ನಡಿಗೆ ಮರಳಲಿದ್ದಾರೆ ಎಂದು ಚಂದ್ರಶೇಖರ್ ಅವರು ಸಂತಸ ವ್ಯಕ್ತಪಡಿಸಿದರು.
