Breaking NewsLatestಚಿಕ್ಕಮಗಳೂರುಜಿಲ್ಲಾ ಸುದ್ದಿ
ಯುಗಾದಿ ಹಬ್ಬದಂದು ನವವಿವಾಹಿತೆ ಆತ್ಮಹತ್ಯೆ!

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಯುಗಾದಿ ಹಬ್ಬದ ದಿನದಂದು ನವವಿವಾಹಿತೆ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ನಡೆದಿದೆ.
ಎನ್ ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿ ಸಾವನ್ನಪ್ಪಿದ್ದಾಳೆ. ಈಕೆ ನಂದಿತ್ ಎಂಬುವನ ಜೊತೆ ಮದುವೆಯಾಗಿದ್ದಳು. ಸ್ವಲ್ಪ ದಿನಗಳ ಕಾಲ ಇವರ ಸಂಸಾರ ಚೆನ್ನಾಗಿ ಇತ್ತು ಎಂದು ಹೇಳಲಾಗಿದೆ. ಆದರೆ ಈಕೆಯ ಸಾವಿಗೆ ಅತ್ತೆ, ಮಾವನೇ ಕಾರಣವೆಂದು ಆರೋಪಿಸಿದ್ದಾರೆ.
ಕಳೆದ ವರ್ಷವಷ್ಟೆ ಈಕೆಗೆ ಮದುವೆಯಾಗಿತ್ತು. ನಂತರದಲ್ಲಿ ಹಣ ತರುವಂತೆ ಗಂಡನ ಅತ್ತೆ ಮಾವ ಕಿರುಕುಳ ನೀಡಿ ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
