Latestಕ್ರಿಕೆಟ್ಕ್ರೀಡೆ

First Test: ಭಾರತ-ನ್ಯೂಜಿಲೆಂಡ್ ಪಂದ್ಯ ಡ್ರಾನಲ್ಲಿ ಅಂತ್ಯ

ಕಾನ್ಪುರ: ಕೊನೆಯ ಒಂದು ವಿಕೆಟ್ ಗಳಿಸುವಲ್ಲಿ ರಹಾನೆ ಪಡೆ ವಿಫಲವಾಗುವುದರೊಂದಿಗೆ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

284 ರನ್ ಜಯದ ಗುರಿಹೊತ್ತ ನ್ಯೂಜಿಲೆಂಡ್‌ ಒಂದು ಹಂತದಲ್ಲಿ ಗೆಲ್ಲುವ ಆತ್ಮವಿಶ್ವಾಸ ತೋರಿತ್ತು. ಆದರೆ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್ ದಾಳಿಗೆ ಸಿಲುಕಿ ಲಗುಬಗನೆ ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ಸಿಲುಕಿತು. ರಚಿನ್ ರವೀಂದ್ರ 91 ಎಸೆತಗಳನ್ನು ಎದುರಿಸಿ ಭಾರತದ ಕೊನೆಯ ವಿಕೆಟ್ ಗೆ ಅವಕಾಶ ಕೊಡಲಿಲ್ಲ. ಭಾರತ ಮೂಲದ ಇನ್ನೋರ್ವ ಆಟಗಾರ ಅಜಾಜ್ ಪಟೇಲ್ 23 ಎಸೆಗಳನ್ನು ಎದುರಿಸಿ 2 ರನ್ ಗಳಿಸಿದರು. ಕಿವೀಸ್ ಪಡೆ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.

ಭಾರತ ಪ್ರಥಮ ಇನ್ನಿಂಗ್ಸ್ ನಲ್ಲಿ 345 ರನ್ ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ‌ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ ಡೀಕ್ಲೇರ್ ಘೋಷಿಸಿತ್ತು. ಕಿವೀಸ್ ಮೊದಲ ಇನ್ನಿಂಗ್ಸ್ ನಲ್ಲಿ 296 ರನ್ ಹಾಗೂ ದ್ವಿತೀಯ ಇನ್ನಿಂಗ್ಸ್ ನಲ್ಲಿ 165 ರನ್ ಗಳಿಸಿತು. ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Spread the love

Related Articles

Leave a Reply

Your email address will not be published. Required fields are marked *

Back to top button