Latestಮನರಂಜನೆಸಿನಿಮಾಸೆಲೆಬ್ರಿಟಿ

ಮಲಯಾಳಿ ಸಂಪ್ರದಾಯದಲ್ಲಿ ನಡೆಯಿತು ಕೆಜಿಎಫ್ ಬೆಡಗಿ ವಿವಾಹ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯ ಗಲಿ ಗಲಿ ಹಾಡಿನಲ್ಲಿ ಸೊಂಟ ಬಳುಕಿಸಿ ಸಖತ್ ಸೌಂಡ್ ಮಾಡಿದ್ದ, ಬಾಲಿವುಡ್ ಕಿರುತೆರೆಯಲ್ಲಿ ನಾಗಿಣಿ ಎಂದೇ ಖ್ಯಾತಿ ಘಳಿಸಿದ ಮೌನಿ ರಾಜ್ ಅದ್ದೂರಿಯಾಗಿ ಹಸೆ ಮಣೆ ಏರಿದ್ದಾರೆ.

ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಜೊತೆ ಮೌನಿ ರಾಯ್ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಸೂರಜ್ ನಂಬಿಯಾರ್ ದಕ್ಷಿಣ ಭಾರತೀಯರಾಗಿರುವ ಕಾರಣ ಅವರ ಸಂಪ್ರದಾಯವನ್ನ ಗೌರವಿಸಿರುವ ಮೌನಿ ರಾಯ್ ಮಲಯಾಳಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ಮೌನಿ ರಾಯ್, ಸೂರಜ್ ನಂಬಿಯಾರ್

ಇಂದು ಗೋವಾದಲ್ಲಿ ಮೌನಿ ರಾಯ್ ಸೂರಜ್ ನಂಬಿಯಾರ್​ರನ್ನ ಕುಟುಂಬಸ್ಥರು ಹಾಗೂ ಕೆಲ ಆಪ್ತರ ಸಮ್ಮುಖದಲ್ಲಿ ವರಿಸಿದ್ದಾರೆ. ಈ ಹಿಂದೆ ದುಬೈನಲ್ಲಿಯೇ ಸತಿ ಪತಿಗಳಾಗಲು ಈ ಜೋಡಿ ನಿರ್ಧರಿಸಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿರೋ ಜೋಡಿ ಹಕ್ಕಿಗಳು ಸಮುದ್ರ ಕಿನಾರೆ ಗೋವಾದಲ್ಲಿ ಹಸೆ ಮಣೆ ಏರಿದ್ದಾರೆ.

ಮೌನಿ ರಾಯ್ ಮದುವೆ ಪೋಟೋ

ಮೌನಿ ರಾಯ್ ಬಿಳಿ ಹಾಗೂ ಕೆಂಪು ಬಣ್ಣದ ಸೀರೆ ಕಂಗೊಳಿಸಿದ್ರೆ ವರ ಸೂರಜ್ ನಂಬಿಯಾರ್ ಗೋಲ್ಡನ್ ಕಲರ್ ಶರ್ಟ್ ಹಾಗೂ ಬಿಳಿ ಬಣ್ಣದ ದೋತಿಯಲ್ಲಿ ಮಿಂಚಿದ್ರು.

ಗೋವಾದಲ್ಲಿ ನಾಗಚೈತನ್ಯ ಹಾಗೂ ಸಮಂತ ಸಪ್ತಪದಿ ತುಳಿದ ಸ್ಥಳದಲ್ಲೇ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರಂತೆ. ಕೊರೊನಾ ಕಾರಣದಿಂದ ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿದೆ. ಮದುವೆಯ ಬಳಿಕ ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆಯಂತೆ.

Spread the love

Related Articles

Leave a Reply

Your email address will not be published. Required fields are marked *

Back to top button