Breaking NewsLatestಜಿಲ್ಲಾ ಸುದ್ದಿವಿಜಯಪುರ

ಸಚಿವರ ಪುತ್ರನಿಗೆ ಬ್ಲ್ಯಾಕ್​​ ಮೇಲ್​​ ಪ್ರಕರಣದಲ್ಲಿ ನನ್ನ ಮಗಳ ಪಾತ್ರವಿಲ್ಲ: ಶಾಸಕ ಯಶವಂತರಾಯ ಗೌಡ ಪಾಟೀಲ್​​​

ವಿಜಯಪುರ : ಸಚಿವರ ಪುತ್ರನಿಗೆ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ನನ್ನ ಮಗಳ ಯಾವುದೇ ಪಾತ್ರವಿಲ್ಲ. ಆಕೆ ವಿದೇಶದಲ್ಲಿ ಓದುತ್ತಿದ್ದಾಳೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿಡುವ ಅವರು, ನನ್ನ ಮಗಳು ವಿದೇಶದಲ್ಲಿ ಓದುತ್ತಿದ್ದಾಳೆ. ಆಕೆ ಬಳಸುತ್ತಿದ್ದ ಸಿಮ್ ಅನ್ನು ಅವಳ ಸ್ನೇಹಿತನ ಕ್ಲೈಂಟ್ ಗೆ ಬೇಕು ಎಂದು ತಿಳಿಸಿದ ಕಾರಣ, ಸ್ನೇಹಿತನಿಗೆ ನೀಡಿದ್ದಾಳೆ. ಆಕೆಯ ಸ್ನೇಹಿತ ರಾಹುಲ್ ಭಟ್ ಗೆ ನೀಡಿದ್ದಾರೆ. ಆ ಸಿಮ್ ಕಾರ್ಡ್ ನಿಂದಲೇ ಬ್ಲ್ಯಾಕ್ ಮೇಲ್ ನಡೆದಿದೆ ಎಂದು ತಿಳಿಸಿದರು.

ಡಿಸೆಂಬರ್ 28 ರಂದು ಸಿಸಿಬಿ ಅಧಿಕಾರಿಗಳಿಂದ ನೋಟಿಸ್ ಬಂದ ನಂತರವೇ ಈ ಎಲ್ಲಾ ವಿಚಾರ ನನಗೆ ತಿಳಿದು, ಆಕೆಯನ್ನು ವಿಚಾರಿಸಿದಾಗ ನನಗೂ ತಿಳಿಯಿತು. ರಾಕೇಶ್ ಅಪ್ಪಣ್ಣ ಮತ್ತು ರಾಹುಲ್ ಭಟ್ ಇಬ್ಬರು ಸ್ನೇಹಿತರು. ನನ್ನ ಪುತ್ರಿಗೂ ಬ್ಲ್ಯಾಕ್ ಮೇಲ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಎಲ್ಲವನ್ನು ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.

ಸಿಸಿಬಿ ತನಿಖೆಗೆ ನಾನು ಎಲ್ಲಾ ಸಹಕಾರ ನೀಡುತ್ತೇನೆ. ಸಚಿವ ನಾವು ಸಾರ್ವಜನಿಕ ಜೀವನದಲ್ಲಿ ಇರೋರು. ನಮ್ಮ ನಮ್ಮಲ್ಲಿ ಯಾವುದೇ ಮುಚ್ಚುಮರೆ ಇರಬಾರದು ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button