
ಬಿಗ್ ಬಾಸ್ ಗೆ ಹೋದವರೆಲ್ಲ ಒಂದೆಲ್ಲ ಒಂದು ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಬಿಗ್ ಬಾಸ್ ಮನೆ ಲವ್ ಸ್ಟೋರಿಗಳಿಗೆ ಸಾಕಷ್ಟು ಫೇಮಸ್ ಆಗಿದೆ. ಇದರಿಂದಲೇ ಎಷ್ಟೋ ಮಂದಿ ತಮ್ಮ ಜೀವನ ಕಂಡುಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ನ ಮತ್ತೊಂದು ಜೋಡಿ ಮದುವೆಯಾಗಲು ಹೊರಟಿದ್ದಾರೆ.
ಹೌದು ಹಿಂದಿ ಬಿಗ್ ಬಾಸ್ ಸೀಸನ್ 15ರ ವಿಜೇತೆ ತೇಜಸ್ವಿ ಪ್ರಕಾಶ್ ಕೂಡ ಇದೇ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಅವರು ಸಹ ಬಿಗ್ ಬಾಸ್ ಸ್ಪರ್ಧಿ ಕರಣ್ ಕುಂದ್ರಾ ಅವರನ್ನು ಮದುವೆ ಆಗೋಕೆ ಅಣಿಯಾಗಿದ್ದಾರೆ. ಮನೆಯಿಂದ ಹೊರ ಬಂದ ಎರಡೇ ದಿನಕ್ಕೆ ಮದುವೆ ಪ್ಲ್ಯಾನ್ ನಡೆದಿದೆ ಎಂಬ ಚರ್ಚೆ ಶುರುವಾಗಿದೆ. ಸದ್ಯ ಎರಡು ಮನೆಯಲ್ಲೂ ಮದುವೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಟಿ ತೇಜಸ್ವಿ ಪ್ರಕಾಶ್ ಅವರು ಎಲ್ಲರ ಗಮನ ಸೆಳೆದಿದ್ದರು. ಈಗ ಅವರು ಬಿಗ್ ಬಾಸ್ 15 ರ ವಿನ್ನರ್ ಆಗಿ ಹೊರಹೊಮ್ಮಿದರು.



