Latestಮನರಂಜನೆಸಂಗೀತ/ನೃತ್ಯ

ಕಿಲಿ, ಪೌಲ್​ರಂತೆ ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಲು ಯುವಕರಿಗೆ ಮೋದಿ ಕರೆ

ಭಾನುವಾರ ನಡೆದ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ 86ನೇ ‘ಮನ್ ಕಿ ಬಾತ್’ ಸಂಚಿಕೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲ ಖ್ಯಾತಿ ಘಳಿಸಿರುವ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಮತ್ತು ತಾಂಜಾನಿಯಾದ ಲಿಪ್ ಸಿಂಕ್ಕಿಂಗ್ ಜೋಡಿಯ ಪ್ರಸ್ತಾಪ ಮಾಡಿದ್ದಾರೆ.

ಮಸಾಯಿ ಆಫ್ರಿಕಾ ಖಂಡದ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್, ಇನ್​ಸ್ಟಾ ರೀಲ್ ಸ್ಟಾರ್ ಕಿಲಿ ಪೌಲ್ ಹಾಗೂ ಸಹೋದರಿ ನೀಮಾ ಅವರನ್ನ ಮೋದಿ ಹೊಗಳಿದ್ದಾರೆ. ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಅವರು ಭಾರತೀಯ ಸಂಗೀತದ ಬಗ್ಗೆ ಒಲವು ತೋರಿದ್ದಾರೆ. ಅವರು ಲತಾ ದೀದಿಗೆ ಗೌರವ ಸಲ್ಲಿಸಿದ್ದು, ನಮ್ಮ ರಾಷ್ಟ್ರಗೀತೆಯನ್ನು ಹಾಡಿದರು. ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಕಿಲಿ ಹಾಗೂ ನೀಮಾ ಅವರಿಗೆ ಭಾರತೀಯ ಸಂಗೀತದ ಬಗ್ಗೆ ಒಲವಿದೆ. ಈ ಕಾರಣಕ್ಕಾಗಿಯೇ ಅವರು ತುಂಬಾ ಜನಪ್ರಿಯರಾಗಿದ್ದಾರೆ. ಅವರ ಲಿಪ್ ಸಿಂಕ್ ತಂತ್ರವು ಅವರು ಅದರಲ್ಲಿ ಎಷ್ಟು ಶ್ರಮಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಇತ್ತೀಚೆಗೆ, ಕಿಲಿ ಹಾಗೂ ನೀಮಾ ನಮ್ಮ ರಾಷ್ಟ್ರಗೀತೆ ‘ಜನ ಗಣ ಮನವನ್ನ ಹಾಡುವ ವೀಡಿಯೊ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಕೆಲವು ದಿನಗಳ ಹಿಂದೆ ಅವರು ಲತಾ ದೀದಿ ಅವರ ಹಾಡನ್ನು ಪ್ರಸ್ತುತಪಡಿಸುವ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.

ಒಡಹುಟ್ಟಿದವರ ಅದ್ಭುತ ಸೃಜನ ಶೀಲತೆಗೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ. ಕೆಲವು ದಿನಗಳ ಹಿಂದೆ ತಾಂಜಾನಿಯಾದ ಭಾರತೀಯ ರಾಯಭಾರ ಕಚೇರಿಯಲ್ಲಿ ಕಿಲಿ ಪೌಲ್ ಅವರನ್ನು ಗೌರವಿಸಲಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button