
ಬೆಂಗಳೂರು: ಬಾಲಾಜಿ ಮೀಡಿಯಾ ಗ್ರೂಪ್ನ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಾಘವೇಂದ್ರ ಗೌಡ ಅವರಿಗೆ ಸ್ಕಾಟ್ಲೆಂಡ್ನ ಲಾರ್ಡ್ಷಿಪ್ ಲಭಿಸಿದೆ.
ಸ್ಕಾಟ್ಲೆಂಡ್ನಲ್ಲಿ ಉದ್ಯಮ ಹೊಂದಿರುವ ರಾಘವೇಂದ್ರ ಗೌಡ ಅವರು, ಅಲ್ಲಿ ಮಾರ್ಗನ್ ನಾಯಕತ್ವದ ಟಿ20 ತಂಡದ ಮಾಲೀಕರೂ ಆಗಿದ್ದಾರೆ. ಉದ್ಯಮ ವಲಯದಲ್ಲಿನ ಅವರ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಲಾರ್ಡ್ಷಿಪ್ ಕೊಡಲಾಗಿದೆ.

ಕೊರೊನಾ ಸಂದರ್ಭದಲ್ಲಿ ಡಾ. ರಾಘವೇಂದ್ರ ಗೌಡ ಅವರು ಸಲ್ಲಿಸಿದ್ದ ಸೇವೆಯನ್ನೂ ಇಲ್ಲಿ ಪರಿಗಣಿಸಲಾಗಿದೆ. ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯಿರುವ ಡಾ. ರಾಘವೇಂದ್ರ ಗೌಡ ಅವರು, ಮಾಧ್ಯಮ ಕ್ಷೇತ್ರದಲ್ಲಿ ವಿಭಿನ್ನ ಬಗೆಯ ಪ್ರಯತ್ನವೊಂದರ ಕನಸು ಕಟ್ಟಿದ್ದು, ಸದ್ಯ ಅದರಲ್ಲಿ ತೊಡಗಿಸಿಕೊಂಡಿದ್ದಾರೆ.

ಬಾಲಾಜಿ ಮೀಡಿಯಾ ಗ್ರೂಪ್ನ ನಿರ್ದೇಶಕಿ ಹರಿಶ್ರೀ ಮೆಹ್ತಾ ಅವರಿಗೂ ಸ್ಕಾಟ್ಲೆಂಡ್ ಲಾರ್ಡ್ಷಿಪ್ ದೊರೆತಿದೆ. ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ಹರಿಶ್ರೀ ಮೆಹ್ತಾ ಅವರು ಟೈಮ್ಸ್ ನೌ ವಾಹಿನಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು.
ಡಾ. ರಾಘವೇಂದ್ರ ಗೌಡ ಮತ್ತು ಹರಿಶ್ರೀ ಮೆಹ್ತಾ ಅವರಿಗೆ ಸ್ಕಾಟ್ಲೆಂಡ್ ಲಾರ್ಡ್ಷಿಪ್ ದೊರೆತಿರುವುದಕ್ಕೆ ಬಾಲಾಜಿ ಮೀಡಿಯಾ ಗ್ರೂಪ್ ಮಾಧ್ಯಮ ಸಲಹೆಗಾರ ಮತ್ತು ಲೈವ್ ಕನ್ನಡ ಪ್ರಧಾನ ಸಂಪಾದಕ ಶಶಿಧರ್ ಭಟ್ ಮತ್ತು ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ.



