Breaking NewsLatestಮೆಟ್ರೋರಾಜ್ಯಸುದ್ದಿ

ಮದ್ಯಪ್ರಿಯರಿಗೆ ಬಿಗ್ ಶಾಕ್ : ವೀಕೆಂಡ್​​ ಕರ್ಪ್ಯೂ ನಲ್ಲಿ ಬಾರ್​​ಗಳು ಬಂದ್​​

ಬೆಂಗಳೂರು: ನಾಳೆ ರಾತ್ರಿಯಿಂದ ರಾಜ್ಯದಲ್ಲಿ ವಾರಾಂತ್ಯ ಕರ್ಪ್ಯೂ ಜಾರಿಗೊಳ್ಳಲಿದೆ. ಈ ವೇಳೆ ಬಾರ್ ಗಳು ಬಂದ್​​​ ಇರುತ್ತವೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಬಕಾರಿ ಇಲಾಖೆಯ ಅಪರ ಆಯುಕ್ತ ರಾಜೇಂದ್ರ ಅವರು, ವಾರಾಂತ್ಯ ಕರ್ಪ್ಯೂ ಸಂದರ್ಭದಲ್ಲಿ ಯಾವುದೇ ಬಾರ್ ಗಳು ತೆರೆದಿರುವುದಿಲ್ಲ. ಮದ್ಯ ಪಾರ್ಸಲ್ ಗೂ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.

ಈ ಮೂಲಕ ವಾರಾಂತ್ಯದ ಕರ್ಪ್ಯೂ ಸಂದರ್ಭದಲ್ಲಿ ಎಣ್ಣೆ ಸಿಗುವ ನಿರೀಕ್ಷೆಯಲ್ಲಿದ್ದ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಬಿಗ್ ಶಾಕ್ ನೀಡಿದ್ದಾರೆ.

ವೀಕೆಂಡ್ ಕರ್ಫ್ಯೂ ವೇಳೆ ಬಾರ್ ಗಳು ತೆರೆದಿರುತ್ತದೆ. ಕೇವಲ ಪಾರ್ಸಲ್ ಗೆ ಮಾತ್ರವೇ ಅವಕಾಶ ಇರುತ್ತದೆ ಎನ್ನಲಾಗುತ್ತಿತ್ತು. ಆದರೆ ವಾರಾಂತ್ಯ ಕರ್ಪ್ಯೂ ಸಂದರ್ಭದಲ್ಲಿ ಬಾರ್ ಗಳು ಕ್ಲೋಸ್ ಆಗಲಿದೆ. ಕಳೆದ ಬಾರಿಯಂತೆ ಪಾರ್ಸಲ್ ಗೆ ಅವಕಾಶ ಇರುವುದಿಲ್ಲ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ನಾಳೆ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ರಾಜ್ಯಾಧ್ಯಂತ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿ ಇರಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button