ಬೊಮ್ಮಾಯಿ ಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಕೊಡುಗೆ?

ಕೋವಿಡ್ ಮಧ್ಯೆಯೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಜೆಟ್ ಮಂಡನೆ ಮಾಡಿದೆ. ಮೊದಲ ಬಾರಿಗೆ ಬೊಮ್ಮಾಯಿ ಬಜೆಟ್ ಮಂಡನೆ ಮಾಡುತ್ತಿದ್ದು ಮುಂದಿನ ಚುನಾವಣೆ ಹಾಗೂ ಕೋವಿಡ್ನಿಂದ ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಈ ಬಾರಿಯ ಬಜೆಟ್ ಮಂಡನೆ ಮಾಡಿದ್ದಾರೆ.
ಬಜೆಟ್ ಮಂಡನೆ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾಯಕತ್ವದಿಂದ ಕೋವಿಡ್ 19 ನಿರ್ವಹಣೆಗೊಂಡಿದ್ದು, ರಾಜ್ಯದಲ್ಲಿ ಮಾಡಿದ ಎಲ್ಲಾ ಪ್ರಯೋಗಗಳು ಯಶಸ್ಸು ಕಂಡಿದೆ ಎಂದಿದ್ದಾರೆ.
ಒಟ್ಟು ಬಜೆಟ್ ಗಾತ್ರ 2.61.977 ಕೋಟಿ ರೂಪಾಯಿ
ಕೃಷಿ ಕ್ಷೇತ್ರಕ್ಕೆ 33.700 ಕೋಟಿ ರೂಪಾಯಿ ಮೀಸಲು
ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8.406 ಕೋಟಿ ರೂಪಾಯಿ
ಆರ್ಥಿಕ ಅಭಿವೃದ್ಧಿ ಉತ್ತೇಜನಕ್ಕೆ 55.657 ಕೋಟಿ ರೂಪಾಯಿ
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 68.479 ಕೋಟಿ ರೂಪಾಯಿ
ಸಂಸ್ಕೃತಿ ಪರಂಪರೆ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಗೆ 3.102 ಕೋಟಿ ರೂಪಾಯಿ
ಮಹಿಳಾ ಸಬಲೀಕರಣ, ಕ್ಷೇಮಾಭಿವೃದ್ಧಿಗೆ 43.188 ಕೋಟಿ ರೂಪಾಯಿ
ಮಕ್ಕಳ ಅಭ್ಯುದಯಕ್ಕೆ 40.944 ಕೋಟಿ ರೂಪಾಯಿ
ಆರೋಗ್ಯ, ಶಿಕ್ಷಣ ಮತ್ತು ಕೌಶಾಲ್ಯಭಿವೃದ್ಧಿಗೆ 6.329 ಕೋಟಿ ಹೆಚ್ಚುವರಿ ಅನುದಾನ
ರೈತ ಶಕ್ತಿ ನೂತನ ಯೋಜನೆ ಘೋಷಣೆಗೆ 600 ಕೋಟಿ ಅನುದಾನ
ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬೊಮ್ಮಾಯಿ ಸರ್ಕಾರದ ಕೊಡುಗೆ
ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ
ಮಹಿಳೆಯರ ಆರೋಗ್ಯಕ್ಕಾಗಿ 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ
ಬಡ ಹಿರಿಯ ನಾಗರಿಕರಿಗೆ ಉಚಿನ ಕಣ್ಣು ತಪಾಸಣೆ, ಚಿಕಿತ್ಸೆ, ಕನ್ನಡಕ ವಿತರಣೆ
ಹುಬ್ಬಳ್ಳಿಯಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಕೇಂದ್ರ
ಬೆಳಗಾವಿಯಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಕೇಂದ್ರ
ಆಯ್ದ 10 ಮೆಡಿಕಲ ಕಾಲೇಜುಗಳಲ್ಲಿ ಕೀಮೋಥೆರಪಿ ಸೆಂಟರ್
ತುಮಕೂರಿನಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಟ್ರಾಮಾ ಕೇರ್ ಸೆಂಟರ್
75 ತಾಲೂಕು ಆಸ್ಪತ್ರೆಗಳಲ್ಲಿ ಜಯದೇವ ಸಹಯೋಗದೊಂದಿಗೆ ಹೃದಯ ಸಂಬಂಧಿ ಚಿಕಿತ್ಸೆ
ಜಿಲ್ಲಾ ಮಟ್ಟದಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಆರಂಭ
4 ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಆರೋಗ್ಯ ವಾಹಿನಿ ಸಂಚಾರಿ ಕ್ಲಿನಿಕ್
ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ನೀಟ್ ಪರೀಕ್ಷೆಗೆ ತರಬೇತಿ
ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕ ನಿಗದಿಗೆ ಸಮಿತಿ
ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬೊಮ್ಮಾಯಿ ಸರ್ಕಾರದ ಕೊಡುಗೆ
ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳ ಉನ್ನತೀಕರಣ
ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂಪಾಯಿ
ನೋಡಿ ಕಲಿ, ಮಾಡಿ ತಿಳಿ ಯೋಜನೆಯಡಿ ಶಾಲೆಗಳಿಗೆ ಕಿಟ್ ವಿತರಣೆ
169 ಸರ್ಕಾರಿ ಬಾಲಿಕೀಯರ ಪ್ರೌಢ ಶಾಲೆಗಳಿಗೆ ಲ್ಯಾನ್ ಇನ್ ಎ ಕಿಟ್
7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣ
ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಾಗಿ ಉನ್ನತೀಕರಣ
ವಿನೂತನ ಮಾದರಿಯಾ 7 ವಿಶ್ವವಿದ್ಯಾಲಯಗಳ ಸ್ಥಾಪನೆ
ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ 7 ವಿವಿ ಸ್ಥಾಪನೆ
ಪೌಷ್ಟಿಕ ಕರ್ನಾಟಕ ಯೋಜನೆಯಡಿ ಸಾರವರ್ಧಿತ ಅಕ್ಕಿ ವಿತರಣೆ
ಬಾಲ್ಯ ವಿವಾಹ, ಬಾಲಕಿಯರು ಶಾಲೆ ಬಿಡುವುದನ್ನ ತಪ್ಪಿಸಲು ಸ್ಫೂರ್ತಿ ಯೋಜನೆ ವಿಸ್ತರಣೆ
ಬೆಂಗಳೂರಿಗೆ 2022ರ ಬಜೆಟ್ ಕೊಡುಗೆ
ಬನಶಂಕರಿ ಜಂಕ್ಷನ್ನಲ್ಲಿ 45 ಕೋಟಿ ವೆಚ್ಚದಲ್ಲಿ ಸ್ಕೈವಾಕರ್ ನಿರ್ಮಾಣ
ನೆನೆಗುದಿಗೆ ಬಿದ್ದಿರುವ 73 ಕಿಮೀ ಉದ್ದದ ಪೆರಿಫೆರಲ್ ರಿಂಗ್ ರೋರ್ಡ್ ಕಾಮಗಾರಿ ಆರಂಭ
NGEF ಆವರಣದಲ್ಲಿ ಸಿಂಗಪೂರ ಮಾದರಿಯಲ್ಲಿ ಗ್ರೀನ್ ಎಕ್ಸ್ಪೋ
ಯಲಹಂಕ ಬಳಿಯ ಜಾರಕಬಂಡೆ ಕಾವಲಿನಲ್ಲಿ ವಾಜಪೇಯಿ ಉದ್ಯಾನವನ ಅಭಿವೃದ್ಧಿ
ಬೆಂಗಳೂರಿನ 4 ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
1.500 ಕೋಟಿ ರೂ ವೆಚ್ಚದಲ್ಲಿ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕ ಉನ್ನತೀಕರಣ
ತೆರಿಗೆ
ಈ ಆರ್ಥಿಕ ವರ್ಷದಲ್ಲಿ ಯಾವುದೇ ತೆರಿಗೆ ಹೆಚ್ಚಳ ಇಲ್ಲ
ವಾಣಿಜ್ಯ ತೆರಿಗೆ ಇಲಾಖೆಗೆ 77.010 ಕೋಟಿ ಸಂಗ್ರಹ ಗುರಿ
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ
ರಾಜ್ಯ ಅಬಕಾರಿ ಇಲಾಖೆಗೆ 29 ಸಾವಿರ ಕೋಟಿ ರೂ ತೆರಿಗೆ ಸಂಗ್ರಹ ಗುರಿ
ರಾಜ್ಯ ಸಾರಿಗೆ ಇಲಾಖೆಗೆ 8.007 ಕೋಟಿ ರೂ ತೆರಿಗೆ ಸಂಗ್ರಹ ಗುರಿ
