Breaking NewsLatestಕಲಬುರ್ಗಿಜಿಲ್ಲಾ ಸುದ್ದಿ
ಜಿ.ಪಂ ಚುನಾವಣೆ ಮಾಡದವರು ವಿಧಾನಸಭೆಗೆ ಚುನಾವಣೆ ನಡೆಸ್ತಾರಾ?: ಸಿದ್ದರಾಮಯ್ಯ

ಕಲಬುರಗಿ: ಅವಧಿಗೆ ಮುನ್ನವೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಆಗುತ್ತೆ ಅಂತ ನನಗೇನು ಅನಸ್ತಿಲ್ಲಾ. ಜಿಲ್ಲಾ ಪಂಚಾಯತಿ ಚುನಾವಣೆ ಮಾಡದವರು ವಿಧಾನಸಭಾ ಚುನಾವಣೆ ಮಾಡ್ತಾರಾ ಅಂತ ಕಲಬುರಗಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಜಯಪುರ ಜಿಲ್ಲೆಗೆ ತೆರಳಲು ಕಲಬುರಗಿ ವಿಮಾನಕ್ಕೆ ಬಂದಿಳಿದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿರೋ ಮಾಹಿತಿ ಪ್ರಕಾರ ಬಿಜೆಪಿ ಅವಧಿಗೂ ಮುನ್ನವೇ ಚುನಾವಣೆಗೆ ಹೋಗಲ್ಲಾ. ಹಾಗೊಂದು ವೇಳೆ ಚುನಾವಣೆಗೆ ಬಂದ್ರೆ ನಾವು ತಯಾರಿದ್ದೇವೆ ಅಂತ ಹೇಳಿದರು.
ಸಿದ್ದರಾಮಯ್ಯರ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಅನ್ನೋ ಹೇಳಿಕೆ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ಈಗಲಟನ್ ರೆಸಾರ್ಟ್‌ಗೆ ದಂಡ ಹಾಕಿದ್ದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಕೋರ್ಟ್ ನಲ್ಲಿ ಕೂಡಾ ನಮ್ಮ ತೀರ್ಮಾನ ಎತ್ತಿಹಿಡದಿದೆ.
