Breaking NewsLatestಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ಕುಡುಕ ಗಂಡನನ್ನ ಕೊಂದಳಂತೆ ಬಿಜೆಪಿ ಲೀಡರ್! ಹೌದಾ..?

ಧಾರವಾಡ: ಕುಡಿದು ಬಂದು ಮನೆಯಲ್ಲಿ ಪದೇ ಪದೇ ಜಗಳವಾಡುತ್ತಿದ್ದ ಪತಿಯನ್ನೇ ಪತ್ನಿ ಹಾಗೂ ಮಗಳು ಸೇರಿಕೊಂಡು ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಮರೆವಾಡ ಗ್ರಾಮದಲ್ಲಿ ನಡೆದಿದೆ. ಧಾರವಾಡ ಗ್ರಾಮೀಣ 71ರ ಘಟಕದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಅಮರಗೋಳ ಎಂಬುವವರೇ ತಮ್ಮ ಮಗಳೊಂದಿಗೆ ಸೇರಿ ಪತಿ ಈರಣ್ಣನನ್ನು ಹತ್ಯೆ ಮಾಡಿದ್ದಾರೆಂದು ಗೊತ್ತಾಗಿದೆ.

ಶವಗಾರದಲ್ಲಿ ಮೃತ ಈರಣ್ಣನ ಶವ

ಕುಡಿದ ಮತ್ತಿನಲ್ಲಿ ತನ್ನ ಮಡದಿಯೊಂದಿಗೆ ಜಗಳ ತೆಗೆದ ಸಮಯದಲ್ಲಿಯೇ ಮಡದಿ ಹಾಗೂ ಮಗಳು ಹೊಡೆದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆಯ ಬಗ್ಗೆ ಸತ್ಯ ಹೇಳದೇ ಕಥೆಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಿತ್ತಾದರೂ ಪೊಲೀಸರ ಮಾಹಿತಿಯಿಂದ ಸತ್ಯ ಹೊರಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ-ಮಗಳನ್ನು ಈಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದವರೆಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button