Latestವಿದೇಶಸುದ್ದಿ

ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ಇಮ್ರಾನ್‌ ಖಾನ್‌ ವಿರುದ್ಧ ವಿಚಾರಣೆ

ಇಮ್ರಾನ್‌ ಖಾನ್‌ಗೆ ಯಾಕೋ ಗ್ರಹಚಾರವೇ ಸರಿ ಇದ್ದಂತಿಲ್ಲ. ಪಾಕಿಸ್ತಾನ ಪ್ರಧಾನಿಯಾಗಿದ್ದವರು ಈಗ ಮಾಜಿ ಪ್ರಧಾನಿಯಾಗಿದ್ದಾರೆ. ಇಮ್ರಾನ್‌ ಖಾನ್‌ಗೆ ಅಧಿಕಾರಾವಧಿಯಲ್ಲಿ ಉಡುಗೊರೆಯಾಗಿ ಪಡೆದ ದುಬಾರಿ ನೆಕ್ಲೇಸ್ ಅನ್ನು ಸರ್ಕಾರದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು, ಅದನ್ನು 18 ಕೋಟಿ ರೂ. ಗೆ ಆಭರಣ ವ್ಯಾಪಾರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪದ ಮೇಲೆ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ಇಮ್ರಾನ್‌ ಖಾನ್‌ ವಿರುದ್ಧ ವಿಚಾರಣೆಯನ್ನು ಆರಂಭಿಸಿದೆ.

ಈ ಸಂಬಂಧ ಬುಧವಾರ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಇಮ್ರಾನ್‌ ಖಾನ್‌ ತಾನು ಉಡುಗೊರೆಯಾಗಿ ಪಡೆದ ನೆಕ್ಲೇಸ್‌ ಅನ್ನು ತೋಶಾ ಖಾನಾ (ರಾಜ್ಯ ಉಡುಗೊರೆ ಭಂಡಾರ)ಕ್ಕೆ ನೀಡಲಿಲ್ಲ. ಅದರ ಬದಲಾಗಿ ಮಾಜಿ ವಿಶೇಷ ಸಹಾಯಕ ಜುಲ್ಫಿಕರ್ ಬುಖಾರಿಗೆ ನೀಡಿದ್ದರು ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಕಾನೂನಿನ ಪ್ರಕಾರ, ರಾಜ್ಯದ ಅಧಿಕಾರಿಗಳು ಗಣ್ಯರಿಂದ ಸ್ವೀಕರಿಸುವ ಉಡುಗೊರೆಗಳನ್ನು ತೋಶಾ – ಖಾನಾದಲ್ಲಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಅವರು ಉಡುಗೊರೆಯನ್ನು ಸಲ್ಲಿಸಲು ವಿಫಲರಾದರೆ ಅಥವಾ ಉಡುಗೊರೆ ಮೌಲ್ಯದ ಅರ್ಧದಷ್ಟು ಮೊತ್ತವನ್ನು ಸಹ ಸಲ್ಲಿಸದಿದ್ದರೆ, ಅದು ಕಾನೂನುಬಾಹಿರ ಕೃತ್ಯವಾಗಿದೆ ಎಂದು ತಿಳಿದುಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button