ಸಂಕ್ರಾಂತಿಯಂದು ತುಂಗಾಭದ್ರಾ ಆರತಿ ಮಂಟಪ ಉದ್ಘಾಟನೆ

ದಾವಣಗೆರೆ: ಕಾಶಿಯ ಗಂಗಾ ಆರತಿ ಮಾದರಿ ದಕ್ಷಿಣ ಭಾರತದ ಹರಕ್ಷೇತ್ರ ಹರಿಹರದಲ್ಲಿ ನಿರ್ಮಿಸಲು ಯೋಜಿಸಿರುವ ತುಂಗಾಭದ್ರಾ ಆರತಿ ಮಂಟಪಗಳ ನಿರ್ಮಾಣ ಕಾರ್ಯದ ಉದ್ಘಾಟನಾ ಕಾರ್ಯಕ್ರಮ ಜನವರಿ 14ರಂದು ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಉದ್ಘಾಟಿಸಲಿದ್ದಾರೆ. ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಈ ತುಂಗಭದ್ರಾ ಆರತಿ ಮಂಟಪಗಳ ನೀಲಿ ನಕ್ಷೆಯ ಬಗ್ಗೆ ಹರಕ್ಷೇತ್ರ ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮೀಜಿ ಅವರು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದುಕೊಂಡರು. ಈ ನೀಲಿನಕ್ಷೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿಗೆ ತೋರಿಸಿದರು.
ಇತ್ತೀಚೆಗೆ ಕಾಶಿಗೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ ತಾವು ಕಾಶಿಯಲ್ಲಿ ನೋಡಿದ ಗಂಗಾ ಆರತಿಯ ಕೆಲ ಅಂಶಗಳನ್ನು ಈ ಯೋಜನೆಯಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು.ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ. ಗುಂಗೆ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.
