Latestರಾಷ್ಟ್ರೀಯ

ಮುಂದಿನ 2-3 ತಿಂಗಳು ಅತಿ ನಿರ್ಣಾಯಕ; ಪ್ರವಾಸೋದ್ಯಮ, ಧಾರ್ಮಿಕ ಸಡಗರ ಬೇಡ: ಐಎಂಎ

ನವದೆಹಲಿ: ಪ್ರವಾಸೋದ್ಯಮ, ಯಾತ್ರಾ ಪ್ರವಾಸ, ಧಾರ್ಮಿಕ ಸಡಗರ ಎಲ್ಲವೂ ಬೇಕು, ಆದರೆ ಅತ್ಯಂತ ಆತಂಕದ ಹೊತ್ತಲ್ಲಿರುವ ನಾವು ಇದಕ್ಕಾಗಿ ಕೆಲವು ತಿಂಗಳುಗಳ ಮಟ್ಟಿಗಾದರೂ ಕಾಯುವುದು ಅನಿವಾರ್ಯ ಎಂದು ಉನ್ನತ ವೈದ್ಯರ ಮಂಡಳಿ ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಮತ್ತು ರಾಜ್ಯ ಸರ್ಕಾರಗಲನ್ನು ಎಚ್ಚರಿಸಿದೆ.

ಕೋವಿಡ್ 2ನೇ ಅಲೆಯಿಂದ ಈಗಷ್ಟೇ ಹೊರಬಂದಿದ್ದೇವೆ. 3ನೇ ಅಲೆ ಹತ್ತಿರವೇ ಇದೆ ಮತ್ತು ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಕೋವಿಡ್ ಕುರಿತ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗದು ಎಂದು ಐಎಂಎ ಹೇಳಿದೆ.

ದೇಶದ ಹಲವೆಡೆ ಅಧಿಕಾರಿಗಳು ಮತ್ತು ಜನರು ನಿರಾಳತೆ ತೋರಿಸುತ್ತಿದ್ದಾರೆ. ಕೋವಿಡ್ ನಿಯಮ ಪಾಲಿಸದೆ ಗುಂಪುಗೂಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿರುವ ಐಎಂಎ, ಎಚ್ಚರವಹಿಸದಿ್ದರೆ ಅಪಾಯ ಎಮದು ಎಚ್ಚರಿಕೆ ಕೊಟ್ಟಿದೆ.

Spread the love

Related Articles

Leave a Reply

Your email address will not be published. Required fields are marked *

Back to top button