ಎಂಟು ಬಾರಿ ಶಾಸಕನಾದವನು, ಸಿಎಂ ಆಗುವ ಯೋಗ್ಯತೆ ನನಗೆ ಇದೆ: ಸಚಿವ ಉಮೇಶ್ ಕತ್ತಿ

ಧಾರವಾಡ : ನಾನೂ ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. 6 ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿರುವ ಅನುಭವವಿದೆ. ಅವಕಾಶ ಸಿಕ್ಕರೆ ನಾನು ಕೂಡಾ ಮುಖ್ಯಮಂತ್ರಿ ಆಗುವ ಯೋಗ್ಯತೆ ಹೊಂದಿದ್ದೇನೆ ಎಂದು ಸಚಿವ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರೆಯೆ ನೀಡಿದ ಅವರು, ಯಾವುದೇ ಕಪ್ಪು ಚುಕ್ಕೆ ನನಗಿಲ್ಲ. ಸಿಎಂ ಆಗಲು ಆಸೆ ನನಗೂ ಇದ್ದೇ ಇದೆ, ಸಿಎಂ ಬಳಿಕ ಸಾಧ್ಯವಾದ್ದರೆ ಪ್ರಧಾನಮಂತ್ರಿ ಆಗುವ ಆಸೆ ಹುಟ್ಟುವದು ಸಹಜ, ನಾಯಕತ್ವ ಬದಲಾವಣೆಯ ಕುರಿತು ಭಾರತೀಯ ಜನತಾ ಪಕ್ಷದ ನಮ್ಮ ಹೈಕಮಾಂಡ ತೀರ್ಮಾನ ಮಾಡುತ್ತದೆ ಎಂದರು.
ಉತ್ತರ ಕರ್ನಾಟಕಕ್ಕೆ ಅನ್ಯಾವಾದ್ದರೆ ಸಹಿಸಲು ಸಾಧ್ಯವಿಲ್ಲ
ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದರೆ, ನಾನು ಉತ್ತರ ಕರ್ನಾಟಕದ ಜನರನ್ನು ಎಬ್ಬಿಸಬೇಕಾಗುತ್ತದೆ. ಈ ಭಾಗಕ್ಕೆ ಅನ್ಯಾಯ ಆದರೆ, ಉತ್ತರ ಕರ್ನಾಟಕವನ್ನು ಪ್ರತ್ಯೇಕವಾಗಿ ಕಟ್ಟಬೇಕಾಗುತ್ತದೆ. ಪ್ರತಿದಿನ ಮುಂಜಾನೇ ಎದ್ರೆ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಎಂದು ಬೇರೆ ಮಾಡುವುದಕ್ಕೆ ಆಗುವುದಿಲ್ಲಾ. ಇಲ್ಲಿ ಸಮಸ್ಯಗಳು ನಿರ್ಲಕ್ಷ್ಯಗಳು ಎದ್ದ ಕಂಡಾಗ ಉತ್ತರ ಕರ್ನಾಟಕ ಕೂಗು ಎಬ್ಬಿಸುವದು ಅನಿವಾರ್ಯವಾಗುತ್ತದೆ, ಉತ್ತರ ಕರ್ನಾಟಕ ಒಡೆಯುವ ಉದ್ದೇಶವಿಲ್ಲಾ, ಅಖಂಡ ಕರ್ನಾಟಕದಲ್ಲಿಯೇ ಬದುಕು ಆಸೆ ನಮ್ಮಗೂ ಇದೆ, ನಿರ್ಲಕ್ಷ್ಯ ಕಂಡು ಬಂದಲ್ಲಿ ಅದೂ ಒಡೆಯುವ ಕೂಗು ಅನಿವಾರ್ಯ, ಅಲ್ಲದೆ ಭಾರಿ ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನ ಸಿಗುವ ಭರವಸೆ ಇದೆ ಎನ್ನು ಮೂಲಕ ಇನ್ನೂ ನಾಯಕತ್ವ ಬದಲಾಣೆ ಕೂಗು ಜೀವಂತ ಇದೆ ಎಂಬ ಪರೋಕ್ಷ ಸುಳಿವು ಬಿಟ್ಟಕೊಟ್ಟರು.
ಸಿದ್ದರಾಮಯ್ಯ ಆರೋಪ ಮಾಡುವುದು ಬಿಟ್ಟು ಮುಂದಿನ ಹೆಜ್ಜೆ ಇಡಲಿ
ಸಿದ್ದರಾಮಯ್ಯನವರ ಸರ್ಕಾರ ಶೇ. 10 ರಷ್ಟು ಸರ್ಕಾರ ಎಂದು ರಾಜ್ಯದ ಜನರ ಮಾತನಾಡುತ್ತಿದ್ದರು, ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಕಾಂಗ್ರೆಸ್ನವರು ಕೇವಲ ಆರೋಪ ಮಾಡುವುದಕ್ಕೆ ಮಾತ್ರ ಸೀಮಿತ, ಅದರಲ್ಲಿ ಸಿದ್ದರಾಮಯ್ಯನವರೇನೂ ಭಿನ್ನವಾಗಿಲ್ಲಾ, ಭ್ರಷ್ಟಾಚಾರ ನಡೆದಿದೆ ಅನ್ನುವುದ್ದಾರೆ, ಕಾಂಗ್ರೆಸ್ನವರು ಕೋರ್ಟ್ಗೆ, ಈಡಿ ಸೇರಿದಂತೆ ಬೇರೆ ಇಲಾಖೆ ಇವೆ ದೂರು ನೀಡಿ ತನಿಗೆ ಆಗ್ರಹಿಸಲಿ ಎಂದರು.
ಶಾಸಕ ಅರವಿಂದ ಬೆಲ್ಲದ ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಲ್ಲದ ಯಾಕೆ ಸಿಎಂ ಆಗಬಾರದು? ನಾನೂ ಸಿಎಂ ಆಗಬಹುದು, ಬೆಲ್ಲದ ಅವರೂ ಸಿಎಂ ಆಗಬಹುದು ನಿರಾಣಿ ಅವರೂ ಸಿಎಂ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದರು.
